ನಮ್ಮ ಜರ್ಮನ್ ವಾಸ್ತವ್ಯ ಪ್ರವಾಸ ಪ್ರಬಂಧಗಳ ಪುಸ್ತಕವನ್ನು ಲೇಖಕ ಹ .ಶಿ. ಭೈರನಟ್ಟಿ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಲೇಖಕರು ತಮ್ಮ ಜರ್ಮನ್ ಪ್ರವಾಸದ ಕುರಿತಾಗಿ ಬರೆದ ಲೇಖನಗಳ ಸಂಗ್ರಹ ಇಲ್ಲದೆ. ಜರ್ಮನ್ ಜನರ ಬದುಕಿನ ಶೈಲಿ, ಅಲ್ಲಿನ ಸ್ಥಳ ಪರಿಚಯ, ಊಟೋಪಚಾರಗಳು, ವ್ಯವಸ್ಥೆ, ಭಾರತಕ್ಕಿಂತ ಯಾವ ರೀತಿ ಭಿನ್ನವಾಗಿದೆ, ಈ ಎಲ್ಲಾ ಅಂಶಗಳನ್ನು ತಮ್ಮ ಲೇಖನಗಳ ಮೂಲಕ ಲೇಖಕರು ಸರಳ ಕನ್ನಡ ಭಾಷೆಯಲ್ಲಿ ಇಲ್ಲಿ ಪ್ರಸ್ತುತಪಡಿಸಿದ್ದಾರೆ.
ವೈಜ್ಞಾನಿಕ ಕಾದಂಬರಿ ಪ್ರಕಟಿಸಿರುವ ಹನುಮಂತ ಶಿ. ಭೈರನಟ್ಟಿ ಅವರು ಕನ್ನಡದ ಪ್ರಮುಖ ಚಿಂತಕ-ಲೇಖಕರಲ್ಲಿ ಒಬ್ಬರು. ಮೂಲತಃ ಬೆಳಗಾವಿ ಜಿಲ್ಲೆಯ ಕುಲಗೋಡ ಗ್ರಾಮದವರು. 1950ರ ಮೇ 2ರಂದು ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿ ಪಡೆದಿದ್ದರು. ಜೀವ ವಿಮಾ ನಿಗಮ (ಎಲ್.ಐ.ಸಿ.)ದಲ್ಲಿ 35 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.ಹಲವು ವೈಜ್ಞಾನಿಕ ಕೃತಿಗಳನ್ನು ಪ್ರಕಟಿಸಿದ್ದರು. ಅವರು 2019ರ ಮೇ 5ರಂದು ಧಾರವಾಡದಲ್ಲಿ ನಿಧನರಾದರು. ...
READ MORE