ಅಂಡಮಾನ್ ನಿಕೋಬಾರ್ ಬಗ್ಗೆ ಆಕರ್ಷಿತರಾದ ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ರಹಮತ್ ತರೀಕೆರೆ ಅವರಂತಹ ಅನೇಕ ಲೇಖಕರು ದ್ವೀಪಸಮೂಹದ ಕುರಿತು ಈಗಾಗಲೇ ಪ್ರವಾಸ ಕಥನಗಳನ್ನು ರಚಿಸಿದ್ದಾರೆ. ಅಂತಹುದೇ ಒಂದು ಅಪೂರ್ವ ಕೃತಿ ಕನ್ನಡದ ಮತ್ತೊಬ್ಬ ಮುಖ್ಯ ಬರಹಗಾರ್ತಿ ಡಾ. ಎಚ್.ಎಸ್. ಅನುಪಮಾ ಅವರು ಬರೆದಿರುವ ’ಅಂಡಮಾನ್ ಕಂಡಹಾಗೆ’.
ಇದೊಂದು ಪ್ರವಾಸ ಕಥನವಾಗಿರುವಂತೆ ಬುಡಕಟ್ಟು ಅಧ್ಯಯನವೂ ಆಗಿದೆ. ಅಲ್ಲಿನ ಜರವಾ, ಸೆಂಟಿನೇಲಿಯರು, ಗ್ರೇಟ್ ಅಂಡಮಾನಿಗಳು, ಒಂಗೇ, ಶೋಂಪೇನರು, ನಿಕೋಬಾರಿಗಳು, ಕಕೇನರು ಇತ್ಯಾದಿ ಸಮುದಾಯಗಳ ಬಗ್ಗೆ ಲೇಖಕಿ ಅನೇಕ ವಿಚಾರಗಳನ್ನು ತೆರೆದಿಟ್ಟಿದ್ದಾರೆ. ಎಂಥ ಪ್ರಾಕೃತಿಕ ಹೊಡೆತಗಳಿಗೂ ಸಿಲುಕದೆ ಆ ಬುಡಕಟ್ಟು ಪರಂಪರೆ ಮುಂದುವರಿದ ರೀತಿ, ಆದಿವಾಸಿ ಸಮುದಾಯಗಳ ಸದ್ಯದ ಸ್ಥಿತಿಗತಿ, ಅಂಡಮಾನನ್ನು ಅತಿಕ್ರಮಿಸಿರುವ ವಲಸಿಗರ ವಿಮರ್ಶಾತ್ಮಕ ಚಿತ್ರಣವಿದೆ. ಅಲ್ಲದೆ ಬಂಧನ- ವಿಮುಕ್ತಿಯ ಕತೆ ಹೇಳುವ ಪೋರ್ಟ್ ಬ್ಲೇರಿನ ಬಗ್ಗೆಯೇ ಪ್ರತ್ಯೇಕ ಲೇಖನ ಇದೆ.
©2025 Book Brahma Private Limited.