ಸುದೀರ್ಘ 15 ವರ್ಷಗಳ ಕಾಲ ಅಮಚವಾಡಿ ಅರಸರು ಆಫ್ರಿಕಾದ ಜನ ಸಮುದಾಯದ ನಡುವೆ ಕಳೆದಿದ್ದಾರೆ. ಆಫ್ರಿಕಾ ಸಮುದಾಯದ ನಡುವೆ ಇದ್ದ ಒಡನಾಟವೇ ಈ ಕೃತಿ ರಚಿಸಲು ಮೂಲ ಕಾರಣವಾಗಿದೆ. ಆಫ್ರಿಕಾ ಸಮುದಾಯದ ಸಂಪ‍್ರದಾಯ, ಸಂಸ್ಕ್ರತಿಯನ್ನು ತುಂಬಾ ಹತ್ತಿರದಿಂದ ಕಂಡವರು. ಆಫ‍್ರಿಕಾದ ನೈಜ ಇತಿಹಾಸ, ಅವರ ಆಚರಣೆ,ಸಂಸ್ಕ್ರತಿ, ಆಫ್ರಿಕನ್ನರ ಬದುಕು ಈ ಎಲ್ಲಾ ಸಂಗತಿಗಳನ್ನು ಈ ಪುಸ್ತಕದಲ್ಲಿಿ ವಿವರವಾಗಿ ಕಟ್ಟಿಕೊಟ್ಟಿದ್ದಾರೆ.
ವೃತ್ತಿಯಲ್ಲಿ ಭೂಗೋಳ ವಿಜ್ಞಾನ ಉಪನ್ಯಾಸಕರಾಗಿದ್ದ ಅಮಚವಾಡಿ ಅರಸು ಅವರು ಪ್ರವಾಸಿ ಪ್ರಿಯರು. ಪ್ರವಾಸದಲ್ಲಿ ಕಂಡುಂಡ ವಿಷಯಗಳನ್ನು ಕನ್ನಡಿಗರಿಗೂ ಮುಟ್ಟಿಸುವ ನಿಟ್ಟಿನಲ್ಲಿ ಹಲವಾರು ಪ್ರವಾಸಿ ಕಥನಗಳನ್ನು ಬರೆದಿದ್ದಾರೆ. ಕಗ್ಗತ್ತಲ ಖಂಡ ಎಂತಲೇ ಪರಿಚಿತವಾಗಿರು ಆಫ್ರಿಕಾ ಖಂಡದಲ್ಲಿ ಸುಮಾರು 15 ವರ್ಷ ನೆಲೆಸಿ ಅಲ್ಲಿನ ಜನಸಮುದಾಯಗಳ ಬಗ್ಗೆ ಸಂಶೋಧನೆ ನಡೆಸಿ ಆಫ್ರಿಕಾದ ಧರ್ಮ ಮತ್ತು ಸಂಸ್ಕೃತಿ ಸಂಶೋಧನಾ ಕೃತಿಯನ್ನು ಬರೆದಿದ್ದಾರೆ. ...
READ MORE