ಕುವೆಂಪು ಅವರ ಮುನ್ನುಡಿ ಇರುವ ಈ ಕೃತಿ ಇದಾಗಿದ್ದು ಪ್ರಭುಶಂಕರ ಅವರು ಪ್ರವಾಸ ಕಥನವಾಗಿದೆ. ಲೇಖಕರು ಹಾಗೂ ಅವರ ಪತ್ನಿ ಶಾಂತಿ ಅವರೊಡನೆ ಅಮೆರಿಕ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಅಲ್ಲಿಯ ರೋಚಕ ಅನುಭವಗಳನ್ನು ಓದುಗರಿಗೆ ಮನಮುಟ್ಟುವಂತೆ ಚಿತ್ರಿಸಿದ ಕೃತಿ ‘ಅಮೇರಿಕಾದಲ್ಲಿ ನಾನು ಶಾಂತಿ’.
ಬರಹಗಾರರಾದ ಪ್ರಭುಶಂಕರ ಅವರು ಜನಿಸಿದ್ದು 1929 ಫೆಬ್ರುವರಿ 15ರಂದು. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಇವರು ಕುವೆಂಪು ಅವರ ಮಾರ್ಗದರ್ಶನದಲ್ಲಿ ‘ಕನ್ನಡದಲ್ಲಿ ಭಾವಗೀತೆ’ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದರು. ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಇವರು ಅಮೆರಿಕ ಭೇಟಿಯ ಕುರಿತು ’ಅಮೆರಿಕಾದಲ್ಲಿ ನಾನು ಮತ್ತು ಶಾಂತಿ’ ಎಂಬ ಪ್ರವಾಸ ಕಥನ ರಚಿಸಿದ್ದಾರೆ. ಅವರ ಕೆಲವು ಕೃತಿಗಳು- ಕನ್ನಡದಲ್ಲಿ ಭಾವಗೀತೆ, ಅಂಗುಲೀಮಾಲ, ಆಮ್ರಪಾಲಿ, ಖಲೀಲ್ ಗಿಬ್ರಾನ್, ಕಾವ್ಯಯೋಗ, ಅಮೆರಿಕದಲ್ಲಿ ನಾನು ಶಾಂತಿ, ನಿವೇದಿತಾ, ಜನ-ಮನ, ಚಿಂತೆ-ಚಿಂತನೆ, ಮಂದಹಾಸ ಮೀಮಾಂಸೆ ಇತ್ಯಾದಿ. ...
READ MORE