ಪತ್ರಕರ್ತ ಹಾಗೂ ಲೇಖಕ ಆನಂದತೀರ್ಥ ಪ್ಯಾಟಿ ಅವರ ಪ್ರವಾಸ ಕಥನ-ಥಾಯ್ಲೆಂಡ್ ಕೃಷಿ ಪ್ರವಾಸ. ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಅವರು ಥಾಯ್ಲೆಂಡ್ ಪ್ರವಾಸದಲ್ಲಿದ್ದಾಗ ಥಾಯ್ಲೆಂಡಿನ ಕೃಷಿ ವಲಯವನ್ನು ಸೂಕ್ಷ್ಮವಾಗಿ ಗಮನಿಸಿ, ನಮ್ಮ ರೈತರು ಅದನ್ನು ಪ್ರಯೋಗಾತ್ಮಕವಾಗಿ ಬಳಸಲು ಸಾಧ್ಯ ಎಂಬ ಆಶಯದೊಂದಿಗೆ ಮತ್ತು ಅಲ್ಲಿಯ ಕೃಷಿಯ ಸ್ವರೂಪ ಕುರಿತು ನಮ್ಮ ರೈತರಿಗೆ ಮಾಹಿತಿ ನೀಡುವ ಉದ್ದೇಶವೂ ಈ ಬರಹದ ಹಿಂದೆ ಇದೆ. ಪ್ರವಾಸಕ್ಕೆ ಹೋದವರು ಕೃಷಿಯನ್ನೇ ಪ್ರಧಾನವಾಗಿ ಇಟ್ಟುಕೊಂಡು ಕನ್ನಡದಲ್ಲಿ ಪ್ರವಾಸ ಕಥನ ಬರೆದವರ ಪೈಕಿ ಕೆಲವೇ ಲೇಖಕರಲ್ಲಿ ಇವರೂ ಒಬ್ಬರು.
ಮೂಲತಃ ಕೊಪ್ಪಳದವರಾದ ಆನಂದ ತೀರ್ಥ ಪ್ಯಾಟಿ ಅವರು ಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಪ್ರಜಾವಾಣಿ ಪತ್ರಿಕೆಯಲ್ಲಿ ಬೆಂಗಳೂರು, ಕಲಬುರಗಿಗಳಲ್ಲಿ ಉಪಸಂಪಾದಕ/ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಕೃಷಿ ನಿರತರಾಗಿರುವ ಪ್ಯಾಟಿ ಅವರು ಕೃಷಿಗೆ ಸಂಬಂಧಿಸಿದ ಬರವಣಿಗೆಯಲ್ಲಿ ವಿಶೇಷ ಆಸಕ್ತಿ ಉಳ್ಳವರು. ಕರ್ನಾಟಕ ಸರ್ಕಾರ ನೀಡುವ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ...
READ MORE