ವಿರೂಪಾಕ್ಷಪ್ಪ ಕೋರಗಲ್ ಅವರ “ಕಾವೇರಿಯಿಂದ ಗೋದಾವರಿ” ಪ್ರವಾಸ ಕಥನವು ಪ್ರವಾಸ ಪ್ರೀಯರಿಗೊಂದು ಉಪಯುಕ್ತ ಮಾರ್ಗದರ್ಶಿಯಾಗಿದೆ. ನಿಗದಿತ ಅವಧಿಯ ನಿಗದಿತ ವೇಳಾಪಟ್ಟಿಯ ಕಂಡಕ್ಸೆಡ್ ಪ್ರವಾಸವನ್ನು ಮಾಡಿದರೂ ಶ್ರೀ ವಿರೂಪಾಕ್ಷಪ್ಪ ಅವರು ಸಾಕಷ್ಟು ಮಾಹಿತಿ ಸಂಗ್ರಹಿಸಿ ಓರ್ವ ಪ್ರವಾಸಿಯಂತೆ ಕುತೂಹಲದಿಂದ ಪ್ರತಿಯೊಂದು ಗಮನಿಸಿ ದಾಖಲಿಸಿದ್ದಾರೆ. ಉತ್ತರದ ನಾಸಿಕ್, ಶಿರಡಿ, ಎಲ್ಲೋರಾ ಅಜೆಂತಾದಿಂದ ಹಿಡಿದು ದಕ್ಷಿಣದ ಕನ್ಯಾಕುಮಾರಿ, ರಾಮೇಶ್ವರದ ವರೆಗಿನ ಅವರ ಪ್ರವಾಸ ಹಲವಾರು ಕುತೂಹಲಕರ ಅಂಶಗಳಿಂದ ಗಮನ ಸೆಳೆಯುತ್ತದೆ. ಅಜೆಂತಾದಂತಹ ಐತಿಹಾಸಿಕ ಮಹತ್ವದ ಗುಹಾಂತರ ದೇವಾಲಯಗಳು, ಚೈತ್ಯಾಲಯಗಳು ಎಲ್ಲವನ್ನೂ ಅವರು ಸವಿವರವಾಗಿ ದಾಖಲಿಸಿದ್ದಾರೆ .
ವಿರೂಪಾಕ್ಷ ಕುಲಕರ್ಣಿ ಅವರ ಊರು ಬೆಳಗಾವಿ. 1962ರಿಂದ ಮಹಾರಾಷ್ಟ್ರದಲ್ಲಿ ವಾಸಿಸುತ್ತಿದ್ದಾರೆ. ಮೊದಲಿನ ಒಂದೆರಡು ವರ್ಷ ಮುಂಬಯಿಯ ಬಿ. ಈ.ಎಸ್.ಟಿ.ಯಲ್ಲಿ ತರುವಾಯ ಇಂದಿನವರೆಗೆ ಪುಣೆಯ ಭಾರತ ಸರಕಾರದ ಹಾಯ್ ಎಕ್ಸ್ ಪ್ಲೋ ಸಿವ್ಹ ಕಾರಖಾನೆಯಲ್ಲಿ ಇನ್ ಸ್ಟ್ರೂಮೆಂಟ್ ಇಂಜಿನೀಯರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. ಸಾಹಿತ್ಯ, ಸಂಗೀತಗಳಲ್ಲಿ ಆಸಕ್ತಿ ಹೊಂದಿರುವ ಅವರು ಕನ್ನಡ ನಾಡು-ನುಡಿಗಳನ್ನು ಕುರಿತು ಮರಾಠಿಯ ಪತ್ರಿಕೆ ಹಾಗೂ ನಿಯತಕಾಲಿಕೆಗಳಲ್ಲಿ ಅವ್ಯಾಹತ ಲೇಖನಗಳನ್ನು ಬರೆದಿದ್ದಾರೆ. ಜೊತೆಗೆ ಅನುವಾದದಲ್ಲಿಯೂ ತೊಡಗಿಕೊಂಡಿರುವ ಅವರು ಕನ್ನಡ ಹಾಗೂ ಮರಾಠಿ ಭಾಷೆಯ ಬಾಂಧವ್ಯ ಬೆಸೆಯುವಂತಹ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ...
READ MORE