ಯುರೋ ನಾಡಿನಲ್ಲಿ

Author : ಲತಾ ಗುತ್ತಿ

Pages 161

₹ 120.00




Year of Publication: 1993
Published by: ಸಚಿನ್ ಪಬ್ಲಿಷರ್
Address: 642, 9th ’ಡಿ’ ಮೈನ್ ’ ಹಂಪಿನಗರ ಬೆಂಗಳೂರು.
Phone: 23403307

Synopsys

ಲೇಖಕಿ ಲತಾಗುತ್ತಿ ಅವರ ಈ  ಪ್ರವಾಸಕಥನ ಅವರ ಮೊದಲ ಗದ್ಯಕೃತಿ. ಸಂವೇದನಾ ಶೀಲೆಯಾದ ಲತಾ ಗುತ್ತಿಯವರು ತಾವು ಸಂದರ್ಶಿಸಿದ ವಿವಿಧ ದೇಶಗಳ ನೈಸರ್ಗಿಕ ಮತ್ತು ಸಾಮಾಜಿಕ ಬೆಡಗುಬಿನ್ನಾಣಗಳನ್ನು ಅವಲೋಕಿಸಿ ತಮಗೆ ದೊರೆತ ಮಾನಸಿಕ ಪ್ರತಿಕ್ರಿಯೆಗಳನ್ನು ಅಭಿವ್ಯಕ್ತಿಸಿದ್ದಾರೆ. ಶಾಸ್ತ್ರೀಯ ವಿವೇಚನೆಯ ಜೊತೆಗೆ ತಮ್ಮ ಸ್ವಂತದ ಅನುಭವಗಳನ್ನು ದೇಶದಿಂದ ದೇಶಕ್ಕೆ ಬದಲಾಗುವ ಜನರ ಜೀವನ ಶೈಲಿ ಹಾಗೂ ರಸಾಭಿರುಚಿಗಳನೆಲ್ಲ ಗುರುತಿಸಿಕೊಂಡು ಒಂದೊಂದು ಅನಿಸಿಕೆಯನ್ನೂ ಸಾಹಿತ್ಯದ ಬಣ್ಣ ಬಣ್ಣಗಳ ಕಾಮನಬಿಲ್ಲಿನಲ್ಲಿ ವೈವಿಧ್ಯಮಯವಾಗಿ ಬಣ್ಣಿಸಿದ್ದಾರೆ. ಜೊತೆಗೆ ನಮ್ಮ ದೇಶದ ಪರಂಪರೆಯನ್ನು ವಿದೇಶಗಳ ಸ್ವಚ್ಛಂದ ಜೀವನದೊಂದಿಗೆ ತುಲನೆ ಮಾಡುತ್ತಾ ತಮ್ಮ ಪ್ರತಿಕ್ರಿಯೆಗಳನ್ನೂ ಯುರೋ ನಾಡಿನ ಕೃತಿಯಲ್ಲಿ ನಿರೂಪಿಸಿದ್ದಾರೆ.

About the Author

ಲತಾ ಗುತ್ತಿ
(12 August 1953)

ಮೂಲತಃ ಬೆಳಗಾವಿಯವರಾದ ಡಾ. ಲತಾ ಗುತ್ತಿ ಅವರು ತಮ್ಮ ಪ್ರವಾಸ ಕಥನ ಹಾಗೂ ಕವಿತೆಗಳ ಮೂಲಕ ಚಿರಪರಿಚಿತರಿದ್ದಾರೆ. ಲತಾ ಅವರು ಜನಿಸಿದ್ದು 1953ರ ಆಗಸ್ಟ್ 12ರಂದು. ಬೆಂಗಳೂರು ಕಂಪ್ಯೂಟರ್ ಟೆಕ್ನಾಲಜಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ತಂದೆ ನಾಗನಗೌಡ, ತಾಯಿ -ಶಾಂತಾದೇವಿ ಪಾಟೀಲ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪಿಎಚ್.ಡಿ. ಪದವಿ ಪಡೆದಿರುವ ಅವರು ಮೈಸೂರು ವಿಶ್ವವಿದ್ಯಾಲಯಿಂದ ಇಂಗ್ಲಿಷಿನಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.  ಯುರೋನಾಡಿನಲ್ಲಿ (1993), ನಾ ಕಂಡಂತೆ ಅರೇಬಿಯಾ (1995), ಅಂಡಮಾನಿನ ಎಳೆಯನು ಹಿಡಿದು (2013), ಚಿರಾಪುಂಜಿಯವರೆಗೆ (2017) ಅವರ ಪ್ರವಾಸ ಕಥನಗಳಾದರೆ ಹೆಜ್ಜೆ (2004), ಕರಿನೀರು (2015) ಕಾದಂಬರಿಗಳು.  “ಪ್ರವಾಸ ಸಾಹಿತ್ಯ ...

READ MORE

Related Books