ಕ್ಷಾಮ ಡಂಗುರ- ಇದು ಬರಹಗಾರ ಶಿವಾನಂದ ಕಳವೆ ಅವರ ಬರ ಪ್ರವಾಸ ಕಥನ. ಬರಪೀಡಿತ ಪ್ರದೇಶಗಳಲ್ಲಿಯ ಹಾಹಾಕಾರದ ಬದುಕನ್ನು ಚಿತ್ರಿಸುತ್ತದೆ. ಕರ್ನಾಟಕ ರಾಜ್ಯದ ಉತ್ತರದ ಬೀದರ್ ನಿಂದ ಹಿಡಿದು ದಕ್ಷಿಣದ ಚಾಮರಾಜ ನಗರದವರೆಗೆ ಹಾಗೂ ಪೂರ್ವದ ಬೆಳಗಾವಿಯ ಖಾನಾಪುರದಿಂದ ಪಶ್ಚಿಮದ ಕೋಲಾರದ ಮುಳಬಾಗಿಲಿನವರೆಗೆ ಸುತ್ತಾಡಿ ದ ಲೇಖಕರು ಬರ ಕುರಿತ ಚಿತ್ರಣವನ್ನು ದಾಖಲಿಸಿದ್ದಾರೆ. ಮನುಷ್ಯ ನಿರ್ಮಿತ ಅನಾಹುತಗಳಿಗೆ ಮನುಷ್ಯನ ಅವಿವೇಕತನ ಹಾಗೂ ಅಜ್ಞಾನವೇ ಕನ್ನಡಿ ಹಿಡಿಯುತ್ತದೆ ಎಂಬ ಬಗ್ಗೆ ಈ ಕೃತಿಯಲ್ಲಿ ಸ್ಪಷ್ಟವಾಗಿಸಿದ್ದಾರೆ.
ಶಿವಾನಂದ ಕಳವೆ ಅವರು ಶಿರ್ಸಿ ಬಳಿಯ ಕಳವೆ ಗ್ರಾಮದವರು. ವೃತ್ತಯಿಂದ ಪತ್ರಕರ್ತರು. ಪರಿಸರ ಜಾಗೃತಿ ಮೂಡಿಸುವ ಬರೆಹಗಳು ಇವರ ವೃತ್ತಿ ವೈಶಿಷ್ಟತೆ. ಶಿರಸಿ ಸಮೀಪದ ನೀರ್ನಳ್ಳಿಯ ‘ಮಲೆನಾಡ ಮಳೆಕೇಂದ್ರ’ದ ರೂವಾರಿಯೂ ಹೌದು. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ, ಅಲ್ಲಿಯ ಕೃಷಿ, ಪರಿಸರ, ಪರಿಸರ, ಜನಜೀವನಗಳನ್ನು ದಾಖಲಿಸಿದ್ದಾರೆ. ಈ ಪ್ರವಾಸದ ಬರವಣಿಗೆ ‘ಕಾಡುನೆಲದ ಕಾಲಮಾನ’. ದೇಸೀ ಜ್ಞಾನದ ವಿವಿಧ ಮಜಲುಗಳ ಅಧ್ಯಯನ ನಡೆಸಿದ್ದಾರೆ. ಮುಡೇಬಳ್ಳಿ, ಮುಳ್ಳೆಹಣ್ಣು (ಸಂಪದ.ನೆಟ್ ಅಂತರ್ಜಾಲ ಪತ್ರಿಕೆ), ಬಹುಧಾನ್ಯ (ಉದಯವಾಣಿ), ದಾಟ್ ಸಾಲು (ನೀರ ಸಂರಕ್ಷಣೆಯ ಕಾರ್ಯದ ದಾಖಲಾತಿ)-ಇವು ಅಂಕಣಗಳ ಶೀರ್ಷಿಕೆಗಳು. ಪ್ರಮುಖ ಕೃತಿಗಳು: ಕಾನ್ ಗೌರಿ, ಗೌರಿ ಜಿಂಕೆಯ ಆತ್ಮಕಥೆ, ಅರಣ್ಯ (ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಿತ), ಅರಣ್ಯ ಜ್ಞಾನದ ...
READ MORE