‘ಬರ್ಮುಡಾ ಟ್ರ್ಯಾಂಗಲ್’ ಪ್ರದೀಪ್ ಕೆಂಜಿಗೆ ಅವರ ಕೃತಿ. ಈ ಪ್ರಪಂಚದಲ್ಲಿ ಕೆಲವು ಪ್ರದೇಶಗಳು ಮೈ ನವಿರೇಳಿಸುವಂಥ ರಹಸ್ಯಗಳ ಅಕ್ಷಯ ಪಾತ್ರೆಗಳಾಗಿವೆ. ಉತ್ತರ ಅಮೆರಿಕಾದ ಬರ್ಮುಡಾ ಟ್ರ್ಯಾಂಗಲ್, ಜಪಾನಿನ ಡ್ರೇಗನ್ ಟ್ಯ್ರಾಂಗಲ್ ಅಥವಾ ಡೆವಿಲ್ಸ್ ಸೀ, ಮೆಕ್ಸಿಕೋದ ಸೈಲೆಂಟ್ ಜೋನ್ ಇಲ್ಲೆಲ್ಲಾ ನಿರಂತರವಾಗಿ ಸಂಭವಿಸುತ್ತಿರುವ ಅಸಾಧಾರಣ ಹಾಗೂ ರಹಸ್ಯಮಯ ಘಟನೆಗಳು ವಿಜ್ಞಾನಕ್ಕೆ ಬಿಡಿಸಲಾರದ ಒಗಟುಗಳಾಗಿವೆ.
ನಮಗೆ ಅರ್ಥವಾಗದುದು ಸುಳ್ಳು ಎಂದು ಅಲ್ಲಗಳೆಯುವುದು ವಿಜ್ಞಾನಕ್ಕೆ ಅಪಚಾರ ಮಾಡಿದಂತೆ. ಎಲ್ಲವೂ ಗೊತ್ತಿರುವ ಪರಿಚಿತ ಪ್ರಪಂಚ ಒಂದರಲ್ಲಿ ಕ್ಷೇಮವಾಗಿ ಬಾಳಿ ಬದುಕುವ ಆಸೆ ಎಲ್ಲರಲ್ಲಿಯೂ ಇರುವಂತೆಯೇ ನೂತನ ಅಪರಿಚಿತ ದಿಗಂತಗಳನ್ನು ಅರಿಯುವ, ಅನ್ವೇಷಿಸುವ ಆಸೆಯೂ ಸಹ ಎಲ್ಲರಲ್ಲಿ ಇರುತ್ತದೆ. ಆದ್ದರಿಂದಲೇ ಕನ್ನಡ ನಾಡಿನ ಓದುಗರಿಗೆ ಬರ್ಮುಡಾ ಟ್ರ್ಯಾಂಗಲ್ನ ವಿಚಿತ್ರ ಘಟನೆಗಳನ್ನು ಅಲ್ಲಿನ ಅದೃಶ್ಯ ಶಕ್ತಿಗಳ ದಿಗಿಲಿಕ್ಕಿಸುವ ಪ್ರಭಾವಗಳನ್ನು ಪರಿಚಯಿಸುವ ಸಾಹಸಕ್ಕೆ ಪ್ರದೀಪ ಕೆಂಜಿಗೆ ಅವರು ಕೈ ಹಾಕಿದ್ದಾರೆ.
ಬರ್ಮುಡಾ ಟ್ರ್ಯಾಂಗಲ್ ಬಗ್ಗೆ ಈವರೆಗೆ ಬಂದಿರುವ ಗ್ರಂಥ ರಾಶಿಯನ್ನೆಲ್ಲ ಅಭ್ಯಾಸ ಮಾಡಿ, ಸರಳ ಸುಲಲಿತ ಕನ್ನಡದಲ್ಲಿ ಬರೆದಿದ್ದಾರೆ. ಮೊದಲಿನಿಂದ ಕೊನೆಯವರೆಗೆ ಅವರು ವಹಿಸಿರುವ ವೈಜ್ಞಾನಿಕ ತಾಟಸ್ಥ್ಯ ಓದುಗರಿಗೆ ಇದನ್ನು ಓದಿ ತಮ್ಮದೇ ಆದ ಧೋರಣೆ ರೂಪಿಸಿಕೊಳ್ಳುವ ಸ್ವಾತಂತ್ರ್ಯವನ್ನೂ, ಪ್ರೆರೇಪಣೆಯನ್ನೂ ನೀಡುತ್ತದೆ.
ಕೃಷಿಕ, ಸಂಶೋಧಕ, ಕಾದಂಬರಿಕಾರ ಪ್ರದೀಪ್ ಕೆಂಜಿಗೆ ಲೇಖಕರೂ ಹೌದು. ಜನನ 1959ರ ಜನೆವರಿ 23 ರಂದು. ಲೇಖಕ ಪೂರ್ಣಚಂದ್ರ ತೇಜಸ್ವಿ ಅವರೊಂದಿಗೆ ಸೇರಿ ಮಿಲೆನಿಯಮ್ ಸರಣಿ ಮತ್ತು ಪ್ಯಾಪಿಲಾನ್ ಸರಣಿ ಪುಸ್ತಕಗಳು ಬರೆದು/ಅನುವಾದಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ 'ಕೆಂಜಿಗೆ' ಇವರ ಊರು. ಅಮೇರಿಕಾದ ಪ್ರಸಿದ್ಧ ಕರಿಯರ ವಿಶ್ವವಿದ್ಯಾಲಯ ಟಸ್ಕ್ಗೀಯಲ್ಲಿ ಪರಿಸರ ವಿಜ್ಞಾನ ಅಭ್ಯಸಿಸಿ, ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅರಿಜೋನಾದ ಮರಳುಗಾಡಿನಲ್ಲಿ ಬುಡಕಟ್ಟು ಜನಾಂಗದವರೊಡನೆ ಕೆಲಸ ಮಾಡಿದ ಅನುಭವವಿದೆ. ಪಶ್ಚಿಮ ಘಟ್ಟಗಳ ಜೀವ ವೈವಿಧ್ಯತೆ ಹಾಗೂ ಅದರ ಮೇಲೆ ಕ್ರಿಮಿ ನಾಶಕಗಳ ದುಷ್ಪರಿಣಾಮಗಳ ಅಧ್ಯಯನದಲ್ಲಿ ಪಿ ಎಚ್ ...
READ MORE