ಖ್ಯಾತ ಕವಿ, ವಿಮರ್ಶಕ ಡಾ. ಜಿ. ಎಸ್. ಶಿವರುದ್ರಪ್ಪನವರು ಹಿಮಾಲಯದ ನಾಲ್ಕು ಧಾಮಗಳೆಂದು ಹೆಸರಾದ ಗಂಗೋತ್ರಿ, ಯಮುನೋತ್ರಿ, ಬದರೀ, ಕೇದಾರಗಳಿಗೆ ಹತ್ತು ದಿನಗಳ ಕಾಲ ಪ್ರವಾಸವನ್ನು ಕೈಗೊಂಡಿದ್ದರು. ಆ ಪ್ರವಾಸದ ಒಂದ ಪುಟ್ಟ ಕಥನವೇ, 'ಗಂಗೆಯ ಶಿಖರಗಳಲ್ಲಿ’. ಪ್ರವಾಸ ಕಥನಕ್ಕೆ ಈ ಶೀರ್ಷಿಕೆ ಏಕೆ ಕೊಟ್ಟರು?! 'ಗಂಗೋತ್ರಿಯಂತೂ ಗಂಗೆಯ ಜನ್ಮಭೂಮಿ; ಕೇದಾರ, ಬದರಿಗಳು, ಶಿವ ಹಾಗೂ ವಿಷ್ಣುವಿನ ನೆನಪುಗಳಿಂದ ಪೌರಾಣಿಕವಾಗಿ ಗಂಗೆಯೊಂದಿಗೆ ಸಂಬಂಧಿಸಿರುವುದರ ಜೊತೆಗೆ ಅಲ್ಲಿಂದ ಉಗಮಿಸುವ ಮಂದಾಕಿನೀ ಅಲಕನಂದಾ ನದಿಗಳೂ ಗಂಗೆಯನ್ನು ಸೇರುತ್ತವೆ. ಯಮುನೆಯಂತೂ ಗಂಗೆಯನ್ನು ಪ್ರಯಾಗದಲ್ಲಿ ಸೇರುತ್ತದೆ. ಭಾರತದ ಶತಮಾನಗಳ ನಾಗರಿಕತೆ ಹಾಗೂ ಸಂಸ್ಕೃತಿಯ ಪ್ರತೀಕವಾಗಿರುವ “ಗಂಗೆ”ಗೆ ಸಂಬಂಧಿಸಿದ ಈ ಪರ್ವತ ಶಿಖರಗಳ ನಡುವೆ ನಾನು ಕೈಕೊಂಡ ಈ ಪ್ರವಾಸಕ್ಕೆ ’ಗಂಗೆಯ ಶಿಖರಗಳಲ್ಲಿ’ ಎಂದು ಕರೆದಿದ್ದೇನೆ ಎನ್ನುವುದು ಲೇಖಕರ ಮಾತು.
©2024 Book Brahma Private Limited.