‘ಜೆರುಸಲೆಂ’ ರಹಮತ್ ತರೀಕೆರೆ ಅವರ ವೈವಿಧ್ಯಮಯ ಲೇಖನಗಳ ಗುಚ್ಛ. ಹಲವಾರು ದೇಶಗಳ ಪ್ರವಸಾನುಭವ ಹಾಗೂ ಅಲ್ಲಿನ ಪರಿಸರ, ಜನಜೀವನ, ಅಲ್ಲಲ್ಲಿನ ಹಸಿ-ಬಿಸಿ ನೋಟಗಳು ಈ ಕೃತಿಯಲ್ಲಿ ಅಡಕವಾಗಿದೆ. ಲೇಖನಗಳ ವೈಶಿಷ್ಟ್ಯವೆಂದರೆ, ಪಡುವಣ ದೇಶಗಳ ಹಾಗೂ ನಮ್ಮ ದೇಶದ ಬಗೆಗಿನ ಪ್ರಾಮಾಣಿಕ ಅನಿಸಿಕೆ ಹಾಗೂ ತುಲನೆಗಳನ್ನು ಇಲ್ಲಿ ಕಾಣಬಹುದು. ನೇರವಾಗಿ ಇಲ್ಲಿ ಹೇಳದಿದ್ದರೂ ಪಶ್ಚಿಮದ ಏಳಿಗೆ ಅಭಿವೃದ್ದಿಗೆಗಳಿಗೆ ನಾವು ನೀಡಿದ ನೀಡುತ್ತಿರುವ ಪ್ರತಿಭಾ ಪಲಾಯನದ ಕೊಡುಗೆ ಕಾರಣವಾಗಿರಬಹುದೆಂಬ ಸಂಗತಿ ಈ ಕೃತಿಯ ಮುಖೇನ ಓದುಗನಿಗೆ ತಿಳಿಯುತ್ತದೆ.
©2024 Book Brahma Private Limited.