‘ಅರಿಗಟೊ ಗೊಜಾಯಿಮಸ್ ನಾಗತಿಹಳ್ಳಿ ಚಂದ್ರಶೇಖರ ಅವರ ಪ್ರವಾಸ ಕಥನವಾಗಿದೆ. ಅಲೆಮಾರಿತನವು ಬಹುಮುಖ್ಯವಾದ ಒಂದು ಜೀವನ ಮೌಲ್ಯ, ಸ್ಥಾವರದ ಅಳಿವು ಮೀರಲು ಯತ್ನಿಸುವ ಒ೦ದು ಜಂಗಮ ಸ್ಥಿತಿ. ತಿರುಗಾಟ ಬರಿಯ ವ್ಯಸನವಲ್ಲ. ತಿರುಗುತ್ತಲೇ ಒಳ-ಹೊರಗಣ್ಣಿನಿಂದ ಸೂಕ್ಷ್ಮವಾಗಿ ಗ್ರಹಿಸುವ ಧ್ಯಾನ ಸ್ಥಿತಿ, ಲೋಕಾನುಭವವು ಮನುಷ್ಯರ ಅನುಭವದ ದಿಗಂತವನ್ನು ವಿಸ್ತರಿಸುತ್ತದೆ. ಅಕ್ಷಾಂಶ-ರೇಖಾಂಶಗಳ ಮೇಲೆ ಜಾರುಗುಪ್ಪೆ ಆಡಿಸುತ್ತದೆ. ಬಹು ಎತ್ತರದಿಂದ, ಎತ್ತರವಾಗಿ ಯೋಚಿಸಲು ಕಲಿಸುತ್ತದೆ. ಸುಳ್ಳು ಗಡಿಗಳನ್ನು ದಾಟಿ, ಕೃತಕ ಬೇಲಿಗಳನ್ನು ಕಿತ್ತೊಗೆದು ಒಂದೇ ಭೂಮಿ, ಒಬ್ಬನೇ ಮನುಷ್ಯ ಎಂಬ ದಾರ್ಶನಿಕತೆಯನ್ನು ಬೋಧಿಸುತ್ತದೆ. ಸೂಕ್ಷ್ಮ ಒಳನೋಟ ಉಳ್ಳ ಪ್ರವಾಸಿಯ ಅನುಭವ ಲೋಕ ಅತ್ಯಂತ ಶ್ರೀಮಂತವಾದುದು. ಇದು ಒಂದೇ ಕಡೆ ನೆಲೆ ನಿಂತು ಗಳಿಸುವ ಸಾಮ್ರಾಜ್ಯ ಸಿರಿಗಿಂತ ಘನವಾದ ಸಂಪತ್ತು. ನಾನು ಬೆರಗಿನಿಂದ ಕಂಡ ಮನುಷ್ಯರು, ನೀರು, ಭೂಮಿ ಮತ್ತು ಆಕಾಶಗಳೆಂಬ ಸಂಪತ್ತನ್ನು ಇಲ್ಲಿ ಇರಿಸಿದ್ದೇನೆ. ಇದು ಜಪಾನ್ ಪ್ರವಾಸ ಕಥನವಾಗಿದೆ ಎಂದಿದ್ದಾರೆ ನಾಗತಿಹಳ್ಳಿಯವರು.
©2024 Book Brahma Private Limited.