ಪತ್ರಕರ್ತ-ಅಂಕಣಕಾರ ವಿಶ್ವೇಶ್ವರ ಭಟ್ ಅವರು ರವಾಂಡಾ ಪ್ರವಾಸದ ಟಿಪ್ಪಣಿಗಳನ್ನು ಬರೆದ ಕೃತಿ-ಗೋರಿಲ್ಲಾ ನಾಮಕರಣ ಪ್ರಸಂಗ. ಆಫ್ರಿಕಾ ಖಂಡದ ಉಗಾಂಡ ದೇಶದ ರವಾಂಡಾ ಇದೆ. ಈ ಕಾಡಿನಲ್ಲಿ 2010ರಲ್ಲಿಯ ಲೆಕ್ಕಾಚಾರದಂತೆ ಸುಮಾರು 880 ಕ್ಪ್ಲಕೂ ಆಚೀಚೆ ಗೋರಿಲ್ಸ್ಲಾಗಳಿದ್ದು, ಈ ತಳಿಯ ಗೋರಿಲ್ಲಾಗಳು ಈ ಭೂಪ್ರದೇಶದಲ್ಲಿ ಮಾತ್ರ ಕಾಣ ಸಿಗುತ್ತವೆ. ಆದ್ದರಿಂದ, ರವಾಂಡಾ ಸರ್ಕಾರ, ಪ್ರತೀ ವರ್ಷ, ವಿಶ್ವದ ವಿವಿದೆಡೆಯ ಶ್ರೇಷ್ಟ ವ್ಯಕ್ತಿಗಳನ್ನು ಆಮಂತ್ರಿಸಿ ‘ಕ್ವಿತಾ ಇಝೀನಾ ಎಂಬ ಹಬ್ಬ ಆಚರಿಸುತ್ತದೆ. ಅಂದರೆ, ಗೋರಿಲ್ಲಾ ನಾಮಕರಣದ ಹಬ್ಬ ಅದು. ವಿನಾಶದ ಅಂಚಿನಲ್ಲಿರುವ ಗೋರಿಲ್ಲಾ ತಳಿಯ ಮರಿಗಳ ಸಮೀಕ್ಷೆ ನಡೆಸಿ, ನಾಮಕರಣ ಮಾಡಲಾಗುತ್ತದೆ. ಇದು ಪ್ರಾಣಿ ಸಂರಕ್ಷಣೆಯ ಭಾಗವಾಗಿ ಹಬ್ಬ ಆಚರಿಸುತ್ತಿದ್ದು, ಈ ಕುರಿತು ಈ ಕೃತಿಯಲ್ಲಿ ವಿವರಗಳಿವೆ.
©2024 Book Brahma Private Limited.