ರಂಜನೆಯ, ಜ್ಞಾನಾರ್ಜನೆಯ, ಅನುಭವಗಳ ಗಣಿಯಾದ ಲೋಕ ಸಂಚಾರದ ಪ್ರಥಮನೆಂದರೆ ನಾರದನೇ ಇರಬೇಕು. ಅವನ ದಾರಿಯನ್ನು ಇಂದಿಗೂ ಅನುಸರಿಸುವವರೇ ಆಗಿದ್ದೇವೆ. ನಾರದ ಭೂಮಾರ್ಗ, ಗಗನಮಾರ್ಗ, ನೀರ್ದಾರಿಗಳಲ್ಲಿ ಸಂಚರಿಸಿದಂತೆ ನಾವೂ ಅದೇ ಮಾರ್ಗಗಳಲ್ಲಿ ಪ್ರವಾಸ ಮಾಡುತ್ತೇವೆ. ಆದರೆ ಹಾಲ್ಗಡಲಿನ ಸಂಚಾರದ ವಿಷಯಕ್ಕೆ ಬಂದರೆ ಅವನದು ನಾಲ್ಕನೇ ಮಾರ್ಗ...'' - ಈ ಮಾತುಗಳು ಈ ಕೃತಿಯ ಲೇಖಕರದು. ಇವರು ಇತ್ತೀಚೆಗೆ ಕೈಗೊಂಡ ಈಜಿಪ್ಟ್ ಪ್ರವಾಸ ಕಥನದ ಬಗ್ಗೆ ಇಲ್ಲಿ ಓದಬಹುದು. ಈ ಕೃತಿಯ ವಿಶೇಷವೆಂದರೆ ವೈಯಕ್ತಿಕ ಪ್ರವರಗಳನ್ನು ಬದಿಗಿಟ್ಟು ಸಂದರ್ಶಿಸಿದ ಸ್ಥಳಗಳ ಚಾರಿತ್ರಿಕ ಮಹತ್ವಗಳನ್ನು ಹೇಳಲಾಗಿದೆ. ನೈಲ್ಜ ನದಿಯ ಅಗಾಧತೆ ಸೇರಿದಂತೆ ಜಗತ್ತಿನ ಹಲವು ರೀತಿ ನೀತಿಗಳು ನಮಗಿಲ್ಲಿ ತಿಳಿಯುತ್ತವೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಲಭಿಸಿದೆ.
©2024 Book Brahma Private Limited.