ಸವಾರಿ ಗಿರಿ... ಗಿರಿ....

Author : ಸಂತೋಷ್ ಅನಂತಪುರ

Pages 120

₹ 125.00




Year of Publication: 2020
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರ ಪಾರ್ಕ್ (ಪೂರ್ವ), ಬೆಂಗಳೂರು-560001,
Phone: 08022161900

Synopsys

ಲೇಖಕ ಹಾಗೂ ಕಥೆಗಾರ ಸಂತೋಷ ಅನಂತಪುರ ಅವರ ಪ್ರವಾಸ ಕಥನ-‘ಸವಾರಿ ಗಿರಿ...ಗಿರಿ. ...’ .ಗಗನದಲ್ಲಿ ಸಂಚರಿಪ, ಕಾಪಾಡು ರಜನಿ ದೇವರೇ, ಪಾಟ್ನಾದ ಅಂಧಿಯೂ ಬರೇಲಿಯ ಬಜಾರೂ, ರಾಂಚಿಯ ಲೆಟ್ಟಿ ಮತ್ತು ಕೊಲ್ಕತ್ತಾದ ಕೆಂಪು, ಬೊಕಾರೋದ ಬಿರುಬಿಸಿಲು ಮತ್ತು ಬಡೆದು ಹೋದ ಕಾರಿನ ಟಯರು, ಥಿಂಪುವಿನಲ್ಲಿ ಅನುಭವಿಸಿದ ತಂಪು, ಬಿಳಿ ಕತ್ತಿನ ಕಾಗೆ ಮತ್ತು ಜಾಂಬಿಯಾ, ವಿಂಡುಹೂಕನ ವಿಂಡೋದಲ್ಲಿ, ಸೀತಾ ನದಿ, ಪಡಿಯಾರರ ಬಿಸಿ ಚಹಾ ಹಾಗೂ ಆಶಾವರಿ ರಾಗ ಹೀಗೆ ಒಟ್ಟು 16 ಅಧ್ಯಾಯಗಳಿರುವ ಈ ಪ್ರವಾಸ ಕಥನವು, ತನ್ನ ಸರಳ ಭಾಷೆಯ ಮೂಲಕ ಓದುಗರನ್ನು ಸೆಳೆಯುತ್ತದೆ.

ಚಿಂತಕ ನಾಗರಾಜ ರಾಮಸ್ವಾಮಿ ವಸ್ತಾರೆ ಮುನ್ನುಡಿ ಬರೆದು ‘ಕಾಸರಗೋಡಿನ ಮೂಲದ ಗಂಡಸು, ತಾನು ಕಲಿತ ಅಷ್ಟೂ’ ಕನ್ನಡವನ್ನು ಅಷ್ಟಿಷ್ಟು ತಮಿಳು, ಮಲಯಾಳವನ್ನು, ‘ಸಾಕಷ್ಟು’ ಹಿಂದಿಯನ್ನು -ಇದೇ ದೇಶ-ಕೋಶಗಳನ್ನು ಓದುವ ಮತ್ತು ಸುತ್ತಿದ ಅನುಭವದ ಮೂಲಕ ಕನ್ನಡದಲ್ಲಿ ನಮಗೆ ದಾಟಿಸಿರುವ ಪರಿ-ಎಲ್ಲವೂ ಬೆರಗುಗೊಳಿಸಿದೆ’ ಎಂದು ಪ್ರಶಂಸಿಸಿದ್ದರೆ, ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಬೆನ್ನುಡಿ ಬರೆದು ‘ ಕೃತಿಯ ಯಾವುದೇ ಅಧ್ಯಾಯವನ್ನು ಓದಿದರೂ ಓದಿನ ಅನುಭವ ಮುಕ್ಕಾಗಿಸುವುದಿಲ್ಲ’ ಎಂದು ಪ್ರವಾಸ ಕಥನದ ಶೈಲಿಯಲ್ಲಿ ಶ್ಲಾಘಿಸಿದ್ದಾರೆ.  

 

About the Author

ಸಂತೋಷ್ ಅನಂತಪುರ

ಲೇಖಕ ಸಂತೋಷ್ ಅನಂತಪುರ ಅವರು ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯ ಅನಂತಪುರದವರು. ಕೇರಳ ರಾಜ್ಯದಲ್ಲೇ ಪದವಿಪೂರ್ವ ಶಿಕ್ಷಣ ಪೂರೈಸಿ, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಹಾಗೂ ಮಂಗಳೂರು ವಿ.ವಿ.ಯಿಂದ ಪತ್ರಿಕೋದ್ಯಮದಲ್ಲಿ  ಸ್ನಾತಕೋತ್ತರ ಪದವಿ ಪಡೆದರು. ವಿದ್ಯಾ ಸಂಸ್ಥೆ ಹಾಗೂ ಕಾರ್ಪೋರೇಟ್ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ. ಸದ್ಯ, ಬೆಂಗಳೂರಿನಲ್ಲಿ ಇನ್ಫೋಸಿಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಥೆ-ಕವನ - ಲೇಖನಗಳು ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳು ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಜಿಡ್ಡು ಕೃಷ್ಣಮೂರ್ತಿ ಅವರ ಒಂದು ಆಂಗ್ಲ ಕೃತಿ ಹಾಗೂ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  ಕೃತಿಗಳು: ಕಾಗೆ ...

READ MORE

Related Books