ಪರ್ವತಗಳ ಕೊರಕಲು ತಾಣ, ಆಕಾಶದೆತ್ತರದ ಬೆಟ್ಟಗಳು, ಶುಭ್ರವಾದ ಆಗಸ, ಪ್ರಕೃತಿಯ ಸುಂದರ ಮಡಿಲು, ಪಾತಾಳಕ್ಕಿಳಿದಂತಹ ಕಣಿವೆಸಾಲು, ಗಿರಿಕಂದರಗಳಲ್ಲಿನ ಶಿಖರಾರೋಹಣ, ಅವರೋಹಣ, ಬಹುವರ್ಣದ ಆಕರ್ಷಕ ಚಿತ್ರಗಳನ್ನೂ ಒಳಗೊಂಡ ರಮ್ಯ ಮನೋಹರ ಪ್ರವಾಸ ಕಥನ `ಹಿಮಾಲಯ ಶಿಖರಗಳ ಸಾನ್ನಿಧ್ಯದಲ್ಲಿ ನಡೆದಾಟ’. ಲೇಖಕಿ ತಾವು ಪ್ರವಾಸಿಸಿದ ಹಿಮಾಲಯ, ಕುಲು, ಮನಾಲಿ, ರೊತಾಂಗ್ ಪಾಸ್, ಸಿಮ್ಲಾ, ಜಮ್ಮು, ಕಾಶ್ಮೀರ, ದಾಲ್ ಸರೋವರ, ಲೇ ಲಡಾಕ್ , ಗಂಗೋತ್ರಿ, ಯಮುನೋತ್ರಿ, ಕೇದಾರ, ಬದರಿ, ಹರಿದ್ವಾರ, ಉತ್ತರಕಾಶಿ ಮುಂತಾದ ಸ್ಥಳಗಳ ಕುರಿತು ಅಲ್ಲಿನ ವಿಶೇಷತೆ ಹಾಗೂ ತಮ್ಮ ಅನುಭವಗಳನ್ನು ಲೇಖಕಿ ಇಂದಿರಾ ಹೆಗ್ಗಡೆ ಅವರು ತೆರೆದಿಟ್ಟಿದ್ದಾರೆ.
'ತುಳುವರ ಮೂಲತಾನ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ' ಕೃತಿಗಾಗಿ ಪಿಎಚ್.ಡಿ ಪದವಿ ಪಡೆದ ಇಂದಿರಾ ಹೆಗ್ಗಡೆ ಅವರ ಆಸಕ್ತಿಯ ಕ್ಷೇತ್ರ ತುಳು ಸಂಸ್ಕೃತಿ. ಕನ್ನಡ ಮತ್ತು ತುಳು ಸೃಜನಶೀಲ ಸಾಹಿತ್ಯದಲ್ಲೂ ಕೈಯಾಡಿಸಿದವರು ಅವರು. ದಕ್ಷಿಣ ಕನ್ನಡದ ಕಿನ್ನಿಗೋಳಿ ಎಳತ್ತೂರು ಗುತ್ತಿನವರಾದ ಇಂದಿರಾ ಅವರು ಬಂಟರು – ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ, ತುಳುನಾಡಿನ ಗ್ರಾಮಾಡಳಿತ ಮತ್ತು ಅಜಲು, ತುಳುವೆರೆ ಅಟಿಲ ಅರಗಣೆ, ಚೇಳಾರು ಗುತ್ತು ಅಗೊಳಿ ಮಂಜಣ್ಣ ಕುರಿತು ಸಂಶೋಧನೆ ನಡೆಸಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಮೂಲತಾನದ ನಾಗಬ್ರಹ್ಮ ಮತ್ತು ಪರಿವಾರ ದೈವಗಳ ಸಂಧಿ ಪಾಡ್ದನ ಕೃತಿಗಳು ತುಳು ಜನಪದ ಸಾಹಿತ್ಯವನ್ನು ಪರಿಚಯಿಸುತ್ತವೆ. ಮೋಹಿನಿಯ ಸೇಡು, ಪುರುಷರೇ ...
READ MORE