ಲಕ್ಷ್ಮೀ ಮಚ್ಚಿನ ಅವರ ‘ಅಂಡಮಾನ್ ಅಂಡಮಾನ್’ . ಅಂಡಮಾನ್ ಅಂತ ಯಾರಾದರೂ ಹೆಸರೆತ್ತಿದರೆ ನಮ್ಮ ನೆನಪಿನ ಭಿತ್ತಿಯಲ್ಲಿ ಮೂಡುತ್ತಿದ್ದುದು ಅದೇ ಕಾಡು, ಚಂಡಿ ಹಿಡಿಯುವ ಮಳೆ, ಬೊಂಡ ತೆಗೆಯುವ ಮಂಗ ಇದನ್ನು ಮೀರಿ ಇನ್ನೊಂದು ಊರಿನ ಕಲ್ಪನೆಯೂ ಮನಸ್ಸಿಗೆ ಸಿಕ್ಕುತ್ತಿರಲಿಲ್ಲ. ಅದಕ್ಕೆ ಪೂರಕ ಎಂಬಂತೆ ಕಾಲಾಪಾನಿಯಂತಹ ಸಿನಿಮಾಗಳು ಬಂದು ಹೋಗಿದ್ದವಲ್ಲ. ಅದೊಂದು ದುರ್ಗಮ ಪ್ರದೇಶವಾಗಿರಬಹುದೆಂದೇ ನಮಗಿದ್ದ ಭಾವನೆ. ಆದರೆ ಅಂಡಮಾನ್ ನಾವು ತಿಳಿದುಕೊಂಡಷ್ಟೇ ಅಲ್ಲ. ಅಲ್ಲಿ ಇನ್ನೂ ತಿಳಿಯಲಿಕ್ಕಿದೆ, ನೋಡಲಿಕ್ಕಿದೆ, ಸುತ್ತ ಹರಡಿರುವ ನೀಲಿ ಸಮುದ್ರದ ತುಂಬ ರಂಗು ರಂಗಿನ ವಿಸ್ಮಯಗಳ ಸರಣಿಯೇ ತಿಳಿದುಕೊಳ್ಳುವಷ್ಟಿದೆ. ಅಂಡಮಾನ್ ಪ್ರವಾಸದ ಕುರಿತು ಮಾಹಿತಿ ನೀಡುವ ಪುಸ್ತಕ ಇದಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಕ್ಷ್ಮೀ ಮಚ್ಚಿನ ಪ್ರಸ್ತುತ ಉಡುಪಿ ನಿವಾಸಿ. ಬೆಳ್ತಂಗಡಿ ತಾಲೂಕಿನಲ್ಲಿ ಪತ್ರಕರ್ತನಾಗಿ ತನ್ನ 20ನೆಯ ವಯಸ್ಸಿಗೆ ತೊಡಗಿಸಿಕೊಂಡು ಹೊಸದಿಗಂತ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕದ ಬಳಿಕ ಉದಯವಾಣಿಯಲ್ಲಿ 2008ರಲ್ಲಿ ವರದಿಗಾರನಾಗಿ ಸೇರಿ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿ ಉಪಮುಖ್ಯ ವರದಿಗಾರನಾಗಿ ಕುಂದಾಪುರದಲ್ಲಿ 2018ರಿಂದ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಗ್ರಾಮೀಣ ಪತ್ರಿಕೋದ್ಯಮದಲ್ಲಿ ಆಸಕ್ತಿ. ಕಳೆದ ಅಷ್ಟೂ ವರ್ಷಗಳಿಂದ ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಅಭ್ಯುದಯಕ್ಕಾಗಿ , ಪರಿಸರ ಪೂರಕವಾಗಿ ಮಾಡಿದ ವರದಿಗಳು ನೂರಾರು. ಇದರಲ್ಲಿ ಫಲ ಕಂಡು ಗ್ರಾಮಾಂತರದ ಸಮಸ್ಯೆ, ಬವಣೆ ನೀಗಲ್ಪಟ್ಟಿದ್ದು ಉಲ್ಲೇಖನೀಯ. ಮಾನವಾಸಕ್ತ ...
READ MORE