‘ಕೈಲಾಸ ಮಾನಸ’ ಕೃತಿಯು ಗಜಾನನ ಶರ್ಮ ಅವರ ದೇವಭೂಮಿಗೊಂದು ಪಯಣದ ಬರಹಗಳ (ಪ್ರವಾಸ ಕಥನ) ಸಂಕಲನವಾಗಿದೆ. ಕೃತಿಯ ಬೆನ್ನುಡಿಯಲ್ಲಿ ಕೆಲವೊಂದು ವಿಚಾರಗಳು ಹೀಗಿವೆ : ಇದು ಕೇವಲ ಪ್ರವಾಸ ಕಥನವಾಗಿಲ್ಲ. ಜೊತೆಗೆ, ಸ್ಥಳೀಯ ಐತಿಹ್ಯ-ಪುರಾಣಗಳನ್ನು ಪರಿಚಯಿಸುತ್ತಾ ಓದುಗರಿಗೆ ಒಂದಿಷ್ಟೂ ಬೇಸರ-ಆಯಾಸವಾಗದಂತೆ ಹಿಮಾಲಯ- ಕೈಲಾಸ ಪರ್ವತ ಮತ್ತು ಮಾನಸ ಸರೋವರಗಳ ಪರಿಚಯ ಮಾಡಿಕೊಡುತ್ತಾರೆ. ಶರ್ಮರ ಎದುರಿಗೆ ಹಿಮಾಲಯದ ಸುದ್ದಿ ಎತ್ತಿದರೆ ‘ಆ ಪ್ರಪಂಚವೇ ಬೇರೆ, ಅದು ದೇವಲೋಕವೇ ಸರಿ. ಬೇಕೆಂದರೆ ನಮ್ಮ ಅನುಕೂಲಕ್ಕೆ ದೇವ ಭೂಮಿ ಎಂದರೂ ಆದೀತು, ಆ ತಣ್ಣನೆಯ ಮೌನ, ಬೆಳ್ಳನೆಯ ಹಿಮ..ಆಹಾ’ ಎನ್ನುತ್ತಾ ತಮ್ಮದೇ ಭಾವ ಪ್ರಪಂಚಕ್ಕಿಳಿದು ಬಿಡುತ್ತಾರೆ’ ಎಂದಿದೆ.
©2025 Book Brahma Private Limited.