ಹಸಿರು ಹಂಪೆ

Author : ಸುದರ್ಶನ ಬಿ.ಎಸ್.

Pages 223

₹ 250.00




Year of Publication: 2019
Published by: ಬದನಗೋಡು ಪ್ರಕಾಶನ
Address: ಬೆಂಗಳೂರು – 560043
Phone: 6364818248

Synopsys

ವಿಂಗ್ ಕಮಾಂಡರ್ ಬಿ.ಎಸ್. ಸುದರ್ಶನ ಅವರ ಕೃತಿ-ಹಸಿರು ಹಂಪೆ. ಜನಸಾಮಾನ್ಯರ ಕಥೆಗಳು ಎಂಬುದು ಕೃತಿಗೆ ನೀಡಿರುವ ಉಪಶೀರ್ಷಿಕೆ. ಈ ಕೃತಿಯು ಪ್ರವಾಸ ಕಥನ ಮಾದರಿಯಲ್ಲಿದೆ. ಕೆರೆ ಕಟ್ಟೆ, ಪುಷ್ಕರಣಿ, ಕಾಲುವೆಗಳ ನಿರ್ಮಾಣಗಳ ಮೂಲಕ ಸದಾ ನೀರಿನ ಅಭಾವ ಆಗದಂತೆ ನೋಡಿಕೊಂಡಿರುವ ವಿಜಯನಗರ ಸಾಮ್ರಾಜ್ಯದ ಆಡಳಿತ ವೈಖರಿ-ವೈಭವದ ಚಿತ್ರಣ ನೀಡುವ ಕೃತಿ ಇದು. ವಿಜಯವಿಠ್ಠಲ ದೇವಸ್ಥಾನದಲ್ಲಿ ಸಂಗೀತ ಹೊಮ್ಮಿಸುವ ಕಂಬಗಳು, ರಂಗ ಮಂಟಪದ ಬೆರಗು, ಪುರಂದರದಾಸರ ಪರಿಚಯ, ಕೃಷ್ಣದೇವರಾಯ ಮತ್ತು ರಾಣಿ ಚಿನ್ನಮ್ಮ ದೇವಿ ಪ್ರೇಮ ಪ್ರಸಂಗ, ಮೈನವಿರೇಳಿಸುವ ರಾಯಚೂರು ಯುದ್ಧ, ಕಂದಾಯ ವ್ಯವಸ್ಥೆ ಎಲ್ಲವೂ ಎಷ್ಟೊಂದು ಸುಸೂತ್ರವಾಗಿ ನಡೆಯುತ್ತಿತ್ತು ಎಂಬುದರ ಸಂಪೂರ್ಣ ಮಾಹಿತಿ ಈ ಕೃತಿಯ ಹೆಗ್ಗಳಿಕೆ.

About the Author

ಸುದರ್ಶನ ಬಿ.ಎಸ್.

ವಿಂಗ್ ಕಮಾಂಡರ್ ಸುದರ್ಶನರು ಹುಟ್ಟಿದ್ದು ದಾವಣಗೆರೆ ಜಿಲ್ಲೆಯ ಗಂಗೂರು ಎನ್ನುವ ಪುಟ್ಟ ಹಳ್ಳಿಯಲ್ಲಿ. ಉಪಾಧ್ಯಾಯರಾಗಿದ್ದ ತಂದೆಯವರೊಂದಿಗೆ ಚಿಕ್ಕಮಗಳೂರು ಜಿಲ್ಲೆಯ ಹಲವಾರು ಶಾಲೆಗಳಲ್ಲಿ ಇವರ ವಿದ್ಯಾಭ್ಯಾಸ ನಡೆಯಿತು. ದಾವಣಗೆರೆಯಲ್ಲಿ ಪಿಯುಸಿ ಮುಗಿಸಿದ ನಂತರ ವಾಯುಸೇನೆಯಲ್ಲಿ ವೈದ್ಯಕೀಯ ಸಹಾಯಕರಾಗಿ ಆಯ್ಕೆಯಾದರು. ದೇಶ ಸುತ್ತು ಕೋಶ ಓದು ಎನ್ನುವಂತೆ ವಾಯುಸೇನೆಯಲ್ಲಿ ಭಾರತದಲ್ಲಿ ಇವರು ಸುತ್ತದ ಪ್ರದೇಶಗಳಿಲ್ಲ, ಅಂತೆಯೇ ಕೋಶವನ್ನು ಓದುತ್ತಲೇ ಇವರು ತಮ್ಮ ವೃತ್ತಿವಲಯದಲ್ಲಿ ಹಂತಹಂತವಾಗಿ ಮೇಲೇರುತ್ತಾ ವಾಯುಸೇನೆಯಲ್ಲಿ ಪೈಲಟ್ ಆಗಿ ಮುಂದುವರೆದರು.  ವೈಮಾನಿಕ ಜೀವನದಲ್ಲಿ ಇವರು ಸುಮಾರು ಹದಿನಾಲ್ಕು ವಿವಿಧ ರೀತಿಯ, ಗಾತ್ರದ ವಿಮಾನಗಳನ್ನು ಹಾರಿಸುತ್ತಾ ಹನ್ನೆರಡು ಸಾವಿರ ಗಂಟೆಗಳಿಗೂ ...

READ MORE

Related Books