ಏಳು ಪರ್ವತಗಳು ಒಂದು ನದಿ

Author : ಎಂ. ವೆಂಕಟಸ್ವಾಮಿ

Pages 176

₹ 125.00

Buy Now


Year of Publication: 2015
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, 11, ಕ್ರೆಸೆಂಟ್‌ ರಸ್ತೆ, ಕುಮಾರ ಪಾರ್ಕ್‌ ಪೂರ್ವ, ಬೆಂಗಳೂರು- 560001

Synopsys

ಏಳು ಪರ್ವತಗಳು ಒಂದು ನದಿ (ಈಶಾನ್ಯ ಭಾರತದ ಅನುಭವ ಕಥನ) ಡಾ. ಎಂ. ವೆಂಕಟಸ್ವಾಮಿ ಅವರು ಪ್ರವಾಸ ಕಥನ. ಈಶಾನ್ಯ ಭಾರತದಲ್ಲಿ 1988 ರಿಂದ 1992 ಮತ್ತು 2007 ರಿಂದ 2009ರ ಮಧ್ಯೆ ಲೇಖಕರು, ಭೂವಿಜ್ಞಾನಿ ಮತ್ತು ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ ಕಾಲದಲ್ಲಿ ಈಶಾನ್ಯ ಭಾರತದ ಸಪ್ತ ಸಹೋದರಿಯರು (ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರ) ಮತ್ತು ಒಬ್ಬ ಪುಟ್ಟ ತಮ್ಮ (ಸಿಕ್ಕಂ) ಎಂದು ಕರೆಯವ ರಾಜ್ಯಗಳಲ್ಲಿ ಓಡಾಡಿದ ಅನುಭವವೇ ಈ ಕೃತಿ. ಇಡೀ ಈಶಾನ್ಯದ ವಲಯದ ಸಾಂಸ್ಕೃತಿಕ, ಸಾಮಾಜಿಕ, ಮತ್ತು ಆರ್ಥಿಕ  ಸ್ಥಿತಿಗತಿಗಳ ಬಗ್ಗೆ, ಇಂಡೋ-ಮಂಗೋಲಾಯ್ಡ್ ಬುಡಕಟ್ಟುಗಳ ಆಚಾರ-ವಿಚಾರ, ಕಲೆ ಭಾಷೆ, ಅವರ ಕಷ್ಟ-ಸುಖ, ಭಾರತ ಚೀನಾ ದೇಶಗಳ ನಡುವಿನ ಸಮಸ್ಯೆಗಳು, ಬಂಡುಕೋರರ ಅಟ್ಟಹಾಸ, ಇಲ್ಲಿನ ಅರಣ್ಯ ಸಂಪತ್ತು - ನೈಸರ್ಗಿಕ  ಸೊಬಗು ಇತ್ಯಾದಿ ವಿವರಗಳನ್ನು ಈ ಕೃತಿಯಲ್ಲಿ ವಿಶ್ಲೇಷಿಸಲಾಗಿದೆ.

ಈಶಾನ್ಯ ಭಾರತ ಅನೇಕ ರೀತಿಯಲ್ಲಿ ವೈವಿಧ್ಯಮಯವಾಗಿದ್ದು ಸೊಬಗಿನ ಗಿರಿಶಿಖರಗಳ ಹಚ್ಚಹಸಿರು ತುಂಬಿಕೊಂಡಿರುವ ಹಿಮಾಲಯದ ಪೂರ್ವ ಭಾಗವಾಗಿದೆ. ಈ ವಲಯದಲ್ಲಿ ಉದ್ಯೋಗ ನಿರ್ವಹಿಸುವಾಗ ಕಂಪ್ಯೂಟರ್, ಮೊಬೈಲ್ ಇಂಟರ್ನೆಟ್, ಅಷ್ಟೇಕೆ ಒಳ್ಳೆಯ ರೈಲು, ವಿಮಾನ ಹೀಗೆ ಯಾವುದೇ ಸೌಕರ್ಯಗಳು ಸರಿಯಾಗಿ ಇರಲಿಲ್ಲ.

ಎರಡು ದಶಕಗಳ ನಂತರ ಮತ್ತೆ ವರ್ಗವಾಗಿ (2007- 2009) ಈ ವಲಯದಲ್ಲಿ ಕೆಲಸ ಮಾಡುತ್ತಿದ್ದಾಗಲೂ ಯಾವುದೇ ಹೆಚ್ಚಿನ ಅಭಿವೃದ್ಧಿ - ಬದಲಾವಣೆಗಳು ಕಂಡುಬರಲಿಲ್ಲ. ಜನಸಂಖ್ಯೆ ಮಾತ್ರ ಹೆಚ್ಚಾಗಿತ್ತು. ಅದೇ ರೀತಿಯ ಉಗ್ರವಾದ, ಪ್ರತಿಭಟನೆಗಳು ಮತ್ತು ಜನರು ಉಸಿರು ಬಿಗಿಹಿಡಿದು ಬದುಕುವ ಪರಿಸ್ಥಿತಿ ಮುಂದುವರಿದಿತ್ತು. ಭಾರತ ಸರಕಾರ ಈ ವಲಯದ ಜನರನ್ನು ಮುಖ್ಯ ವಾಹಿನಿಗೆ ಕರೆತರಲು ಎಷ್ಟೇ ಪ್ರಯತ್ನಪಟ್ಟರೂ ಪರಿಸ್ಥಿತಿ ಅಷ್ಟಾಗಿ ಫಲಕಾರಿಯಾಗಿರಲಿಲ್ಲ. ಒಟ್ಟನಲ್ಲಿ ಈ ಕೃತಿಯಲ್ಲಿನ ಲೇಖನಗಳು ಈಶಾನ್ಯ ಭಾರತದ ಒಂದು ಸ್ಥೂಲ ನೋಟವನ್ನು ವಿವರಿಸುತ್ತವೆ. ಕನ್ನಡದಲ್ಲಿ ಈಶಾನ್ಯ ಭಾರತದ ಬಗ್ಗೆ ಲಭಿಸುವ ಅಪರೂಪ ಸ್ವಅನುಭವಗಳ ಪುಸ್ತಕ ಇದಾಗಿದ್ದು ಈಗಾಗಲೆ ಮೂರು ಮುದ್ರಣಗಳನ್ನು ಕಂಡಿದೆ.

About the Author

ಎಂ. ವೆಂಕಟಸ್ವಾಮಿ

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಗೆ ಸೇರಿದ ಡಾ.ಎಂ.ವೆಂಕಟಸ್ವಾಮಿ ಅವರು 06.11.1955 ರಂದು ಜನಿಸಿದರು,  ಪ್ರಾಥಮಿಕ ಶಿಕ್ಷಣ ತನ್ನ ಊರಿನಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಘಟ್ಟುಮಾದಮಂಗಳದಲ್ಲಿ ಪೂರೈಸಿದರು. ಕೆ.ಜಿ.ಎಫ್‍ನ ಮುನಿಸಿಪಲ್ ಬಾಯ್ಸ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಮತ್ತು ಕೆಜಿಎಫ್ ಪ್ರ.ದ.ಕಾಲೇಜಿನಲ್ಲಿ ಬಿ.ಎಸ್ಸಿ. ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (ಭೂವಿಜ್ಞಾನ) ಎಂ.ಎಸ್ಸಿ., ಮುಗಿಸಿದರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾದರು. ಅದಕ್ಕೆ ಮುಂಚೆ ಸ್ವಲ್ಪ ಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿ (SAIL) ಕೆಲಸ ಮಾಡಿದ್ದರು.  ‘ಕೋಲಾರ ಚಿನ್ನದ ಗಣಿಗಳು'' ಮಹಾಪ್ರಬಂಧಕ್ಕೆ ...

READ MORE

Excerpt / E-Books

ಏಳು ಪರ್ವತಗಳು  ಒಂದು ನದಿ (ಈಶಾನ್ಯ ಭಾರತದ ಸ್ವಅನುಭವ ಕಥನ) (ಈ ಪುಸ್ತಕದ ವಿಶೇಷತೆಗೆ ಇದರ ಪರಿವಿಡಿಯೇ ಸಾಕ್ಷಿ) ಈಶಾನ್ಯ ರಾಜ್ಯಗಳಲ್ಲಿನ ಅನುಭವಗಳು: ಅಧ್ಯಾಯಗಳು: 1. ರುಂಡ ಚೆಂಡಾಡುವ ಬುಡಕಟ್ಟು ಜನಾಂಗಗಳು 2. ಈಶಾನ್ಯ ಭಾರತದ ಬಂಡುಕೋರರು 3. ಬ್ರಹ್ಮ(ನ)ಪುತ್ರ - ಜಿಮಾ ಯಾಂಗ್ ಝೋಂಗ್ ನದಿ; ಮಜಲಿ ದ್ವೀಪ 4. ಚಿರಾಪುಂಜಿ ಅಲ್ಲ, ಸೊಹರಾ 5. ಮೇಘಾಲಯ: ಗುಹೆಗಳ ಮಾಯಾಲೋಕ 6. ಗ್ಯಾರಿಸನ್ ತಂಪುದಾಣ: ಶಿಲ್ಲಾಂಗ್ ಮನೆಯಲ್ಲಿ ಕಳ್ಳತನ, ಜೀಪ್ ಚಾಲಕ ಕಾಡಲ್ಲಿ ತಪ್ಪಿಸಿಕೊಂಡಿದ್ದು 7. ಅಸ್ಸಾಂನ - ಬೀಹು ವೈಯಾರ ಮಯೂರ 8. ತವಾಂಗ್ ಬೌದ್ಧಾಶ್ರಮ ಮತ್ತು ಮೊನ್ಫಾಗಳು, ಮೊನ್ಫಾಗಳ ನಾಡು ತವಾಂಗ್ 9. ನಾನು ನೋಡಿದ 1962 ಭಾರತ - ಚೀನಾ ಯುದ್ಧಭೂಮಿ, ವೀರಯೋಧ ಜ್ಸವಂತ್ ಸಿಂಗ್ ರಾವತ್ 10. ವಿಶ್ವ ಮಹಾಯುದ್ಧಗಳ ಕೊಹಿಮಾ ರುಧ್ರಭೂಮಿ 11. ಗೌಹಾಟಿಯ ಕಾಮಾಕ್ಯ ದೇವತೆ 12. ಉನಕೋಟಿ (ಕೋಟಿಗೆ ಒಂದು ಕಡಿಮೆ ದೇವತಾ ಶಿಲ್ಪಗಳು) 13. ಶಿಲಾಪಾಸ್ ನಲ್ಲಿ ಒಂದು ಘಟನೆ 14. ಶಿಲ್ಲಾಂಗ್ ನ ಕನ್ನಡ ಮನೆ 15. ಸಿಕ್ಕಿಂ ಎಂಬು ಪುಟ್ಟ ರಾಜ್ಯ, ಮನೆಮನೆಗೂ ಲೆಪಂಗಾಗಳು, ಕಾಂಚನ್ ಜೊಂಗಾ ಮತ್ತು ಸಿಕ್ಕಿಂ ನೃತ್ಯ 16. ನಿಜೋರಾಂ 17. ಓಡಾಟದ ನಡುವೆ ಒಂದು ಕನಸು ನಾಗಾ ರಾಜ್ಯದಲ್ಲಿನ ವಿಶೇಷ ಅನುಭವಗಳು: 1. ನಾಗಾರಾಜ್ಯದ ಕಡೆಗೆ ಭೂಮಿ ಕಂಪಿಸಿ ಬೀದಿಗೆ ಓಡಿದ್ದು, ನಾಯಿ ತಿಂದು ಹಗುರವಾಗಿ ಹಾರಾಡಿ 2. ಸ್ವಯಂ ಶಾಸಕರು ಸ್ವಂತ ಆಡಳಿತ 3. ಮೊದಲ ವಿಮಾನಯಾನ 4. ನಾಗಾಗಳ ನಡುವೆ 5. ಖೇರಿಮಾ ಜೆಬಿ ಮತ್ತು ಅಡಿಗೆ ಮನೆ ಕಾಡು-ಕಣಿವೆಗಳಲ್ಲಿ 6. ಟುಯಿನ್ ಸಾಂಗ್ನಲ್ಲಿ ಎರಡು ಶಿಖರಗಳು ಅಪ್ಪಿಕೊಂಡಾಗ 7. ದೀಖು ನದಿಯ ಕಡೆಗೆ ಇತ್ಯಾದಿ ವಿಷಯಗಳ ವಿವರಣೆ ಇದೆ.

Reviews

(ಹೊಸತು, ಮಾರ್ಚ್ 2015, ಪುಸ್ತಕದ ಪರಿಚಯ)

ಈಶಾನ್ಯ ಭಾರತದ ಪರ್ವತಗಳಿಂದ ಕೂಡಿದ ಏಳು ರಾಜ್ಯಗಳು ಹಾಗೂ ಆ ಪ್ರದೇಶ ಗಳಲ್ಲಿ ನೆರೆಹಾವಳಿಗೆ ಹೆಸರಾದ ಭಾರತದ ಗಂಡುನದಿಯೆಂದೇ ಖ್ಯಾತವಾದ ಬ್ರಹ್ಮಪುತ್ರ ನದಿ - ಇವು ಇಲ್ಲಿನ ಲೇಖನಗಳಿಗೆ ಮೂಲಸೆಲೆ. ಇವು ಬ್ರಿಟಿಷರ ಕಾಲದಿಂದಲೂ ಮಿಲಿಟರಿ ಕೂಡ ನಿಯಂತ್ರಿಸಲಾಗದ ರಾಜ್ಯಗಳು. ಇಂದಿಗೂ ಯಾವುದೇ ಅಭಿವೃದ್ಧಿ ನಾಗರಿಕತೆಗಳಿಗೆ ಸಹಕರಿಸದೆ ಪ್ರತ್ಯೇಕ ರಾಜ್ಯಕ್ಕಾಗಿ ಬೇಡಿಕೆಯಿಟ್ಟು ಹಲವು ಬಂಡುಕೋರ ಗುಂಪುಗಳು ಹೋರಾಡುತ್ತಿವೆ. ಉಗ್ರ ಸಂಘಟನೆಗಳು ಸರಕಾರದ ನಿದ್ದೆ ಕೆಡಿಸಿವೆ. “ಇಡೀ ಭಾರತದಲ್ಲಿ ಬ್ರಿಟಿಷರು ಭಾರತೀಯರಿಗೆ ಸಿಂಹಸ್ವಪ್ನವಾಗಿದ್ದರೆ, ಈಶಾನ್ಯವಲಯದಲ್ಲಿ ನಾಗಾಗಳು ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು” ಎಂದು ಲೇಖಕರು ಉಲ್ಲೇಖಿಸಿರುವುದು ಆ ಜನರನ್ನು ನಾವು ಅರ್ಥೈಸಲು ಸಾಧ್ಯವಾಗಿದೆ. ಹಿಮಾಲಯದ ಸರಹದ್ದಿನ ಈ ರಾಜ್ಯಗಳ ಸಾಂಸ್ಕೃತಿಕ - ರಾಜಕೀಯ - ಸಾಮಾಜಿಕ ಬದುಕು ಅವರ ಬುಡಕಟ್ಟುಗಳ - ಅದಿವಾಸಿಗಳ ಪೂರ್ವೆತಿಹಾಸದೊಂದಿಗೆ ಈ ಕೃತಿಯಲ್ಲಿ ಹೇಳಲಾಗಿದೆ. ಇದು ಕೇವಲ ಓದಿನಿಂದ ಸಂಗ್ರಹಿಸಿದ ಮಾಹಿತಿ ಮಾತ್ರವಲ್ಲ, ಲೇಖಕರು ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯದ ಭೂವಿಜ್ಞಾನಿಯಾಗಿ ಈ ದೇಶಗಳಲ್ಲಿ ಸಂಚರಿಸಿ ಪ್ರತ್ಯಕ್ಷ ಅನುಭವದೊಂದಿಗೆ ಬರೆದ ಕೃತಿ, ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಎದುರಾದ ಹಲವು ಸಂಗತಿಗಳನ್ನು ರೋಚಕವಾಗಿ ವರ್ಣಿಸಿದ್ದಾರೆ. ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಈ ರಾಜ್ಯಗಳು ರುದ್ರರಮಣೀಯ ಭೀಕರತೆಯನ್ನೂ ಹೊಂದಿವೆ

Related Books