ಲೇಖಕ ಪ್ರಕಾಶ್ ಕೆ. ನಾಡಿಗ್ ಅವರ ಪ್ರವಾಸ ಕಥನ-ನಾಕಂಡ ಯುರೋರ್ಪ ಖಂಡ. ಲೇಖಕರು ತಾವು ಕೈಗೊಂಡ ಯುರೋಪ ಪ್ರವಾಸ ಕುರಿತು ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ. ಭಿನ್ನ ಸಂಸ್ಕೃತಿ, ಆಚಾರ-ವಿಚಾರ-ನಡೆ-ನುಡಿಗಳ ಸ್ವರೂಪ-ಸ್ವಭಾವವನ್ನು ನಿರೂಪಿಸಿದ್ದಾರೆ. ಅಲ್ಲಿ ಆದ ಆತಂಕ-ಅಡೆ-ತಡೆಗಳನ್ನೂ ವಿವರಿಸಿದ್ದಾರೆ. ಮನೆಯಿಂದಲೇ ವಿಮಾನ ಪ್ರಯಾಣದ ಟಿಕೆಟ್ ಬುಕ್ ಮಾಡುವ ಹಾಗೂ ಪ್ರಯಾಣದ ಸಂದರ್ಭದಲ್ಲಿ ಎಷ್ಟೇ ಜಾಗರೂಕತೆವಹಿಸಿದ್ದರೂ ಎದುರಾಗುವ ಸಮಸ್ಯೆಗಳ ಕುರಿತೂ ವಿವರಿಸಿದ್ದಾರೆ. ಸರಳ ಭಾಷೆಯಲ್ಲಿಯ ಈ ಪ್ರವಾಸ ಕಥನವು, ಲೇಖಕರ ಪ್ರವಾಸದ ಅನುಭವವು ಓದುಗರ ಅನುಭವವೂ ಆಗುವಷ್ಟು ಪರಿಣಾಮಕಾರಿಯಾಗಿದೆ.
ಲೇಖಕ ಪ್ರಕಾಶ್ ಕೆ. ನಾಡಿಗ್ ಅವರು ಮೂಲತಃ ಶಿವಮೊಗ್ಗದವರು. ತಂದೆ ಕೇಶವ ಮೂರ್ತಿ ನಾಡಿಗ್, ತಾಯಿ ಶಾಂತಾ ನಾಡಿಗ್. ಶಿವಮೊಗ್ಗದ ದೇಶಿಯ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಹಂತದಿಂದ ಪದವಿವರೆಗೂ ಶಿಕ್ಷಣ ಪೂರೈಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದಿಂದ ಸೂಕ್ಷ್ಮಾಣುಜೀವ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ತುಮಕೂರಿನ ಔಷಧ ತಯಾರಿಕಾ ಕಂಪನಿಯಲ್ಲಿ ಗುಣಮಟ್ಟ ಖಾತ್ರಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಪ್ರವೃತ್ತಿಯಲ್ಲಿ ಲೇಖಕರು, ಅಂಕಣಕಾರರು ಆಗಿದ್ದಾರೆ. ಗುಬ್ಬಚ್ಚಿ ಸಂತತಿಯನ್ನು ಉಳಿಸಿ ಬೆಳೆಸಲು " ಗುಬ್ಬಚ್ಚಿ ಸಂಘ" ಸ್ಥಾಪಿಸಿ, ಮಕ್ಕಳಲ್ಲಿ ಪರಿಸರ ಹಾಗೂ ಪಕ್ಷಿಗಳ ಬಗ್ಗೆ ಅರಿವು ಮೂಡಿಸುತ್ತಿದ್ದು, ಮಕ್ಕಳನ್ನು ಸೇರಿಸಿಕೊಂಡು ತುಮಕೂರಿನಲ್ಲಿ ಸುಮಾರು ಸಾವಿರಕ್ಕಿಂತ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ಕೃತಿಗಳು: ಗಣೇಶನ ಬೆಂಗ್ಳೂರ್ ಯಾತ್ರೆ, ಪುಟಾಣಿಗಳಿಗಾಗಿ ...
READ MORE