ʼವಂಗದರ್ಶನʼ ಕೃತಿ ಲೇಖಕ ಕೃಷ್ಣಾನಂದ ಕಾಮತ್ ಅವರ ಪ್ರವಾಸ ಕಥನ. ಕೃತಿಯು ಅನೇಕ ರೇಖಾಚಿತ್ರಗಳನ್ನು ಹೊಂದಿದ್ದು ಪಶ್ಚಿಮ ಬಂಗಾಲದ ಇತಿಹಾಸದ ಮಾಹಿತಿಯನ್ನು ಈ ಪುಸ್ತಕವು ಒಳಗೊಂಡಿದೆ. ಈ ಕೃತಿಯು 46 ಅಧ್ಯಾಯಗಳನ್ನು ಹೊಂದಿದೆ. ಪರಿವಿಡಿಯಲ್ಲಿ ಹೌರಾಮೇಲ್, ಮಹಾನಗರಗಳಲ್ಲಿ, ಲಾಲಗೋಲ ಪೆಸೆಂಜರ್,ಸುಖಪ್ರಯಾಣವಾಯಿತೆ, ಪ್ರಥಮ ದರ್ಶನ,ಪರಿಚಯ, ಅಫೀಸಿನಲ್ಲಿ, ಬಂಗಾಲಿ ಕಲಿತೆ, ಭಾಗೀರಥಿಯ ಭೇಟಿ,ಮೀರಾ ಕಂಡಾಗ,ಅಂದು ರವಿವಾರ, ನೆರೆಯವರು,ಕಾಲಿಪದನ, ನಿಷ್ಕ್ರಮಣ, ರಾಮನಗರ, ಉಪದ್ರವಿಗಳು,ನಿರೀಕ್ಷನೆಗೆ ಹೋದಾಗ,ಇಕ್ಷು ಭಕ್ಷಣ,ಮಹಾದೇವ,ಪ್ಲಾಸಿ,ಮುರಶೀದಬಾದ, ಆತಿಥ್ಯ, ಅಡಿಗೆ, ಜೊಂದಾ,ಕಂಪನಿಯಲ್ಲಿ ಗಲಭೆ,ಕ್ರಾಂತಿಯ ಗಾಲಿ ಬೀಸಿತು,ಓ ಕಲಕತ್ತಾ,ದಕ್ಷಿಣೇಶ್ವರ,ಜಡಿಮಲೆ, ಅಂತರಾಳದ ಗುಟ್ಟು, ಈತ ಬಂಗಾಲಿ, ಹೊರನಾಡಿಗೆ ಹೋದವರು, ಹೀಗಿದ್ದರವರು,ರಾಜಿನಾಮೆ, ಬೀಲ್ಕೊಂಡಾಗ,ರಾಜಕೀಯ ರಂಗ,ನಕ್ಸಲೀಯರು,ಮಾರ್ಕ್ಸವಾದಿಗಳು,ರೋಮಾಂಚಕ ಘಟನೆಗಳು, ಕಂಸನೂ ನಕ್ಸಲನಾಗಿದ್ದ, ಕಾರ್ಮಿಕರಲ್ಲಿ ಕೋಲಾಹಲ, ವಿಶ್ವಭಾರತಿ,ಆಟಕೂಟಗಳು: ಬಂಗಾಲ ಮಾದರಿಯಲ್ಲಿ,ಬಂದ್ ಬಾಂಗ್ಲಾ ಬಂದ್,ಶಿಕ್ಷಣದಲ್ಲಿ ಬಿರುಕು ಮತ್ತು ಬಂಗ್ಲ ಸೋನಾರ ಬಂಗ್ಲ. ಬಂಗಾಲದ ಸ್ಥಳಗಳ ಬಗೆಗೆ ಸಕಾರಾತ್ಮಕ ಮತ್ತು ನಕಾರಾತ್ಮಕ ಸಂಗತಿಗಳನ್ನು ಈ ಕೃತಿಯು ಒಳಗೊಂಡಿದೆ.
©2024 Book Brahma Private Limited.