ಕೈಲಾಸ ಮಾನಸ ಸರೋವರ ಯಾತ್ರೆಯ ಅನುಭವದ ಸವಿಸ್ತಾರ ಮಾಹಿತಿ ನೀಡುವ ಕೃತಿ 'ನಾ ಕಂಡ ಕೈಲಾಸ'. ಲೇಖಕ ಶ್ರೀಕೃಷ್ಣ ಎನ್. ಬುಗುಟ್ಯಾಗೋಳ, ಈ ಕೃತಿಯಲ್ಲಿ ಮಾನಸ ಸರೋವರದ ನಿಸರ್ಗ, ಸ್ಥಳ ಹಾಗೂ ಪುರಾಣ ಐತಿಹ್ಯದ ಉಲ್ಲೇಖಗಳನ್ನು ನೀಡಿದ್ದಾರೆ. ಪ್ರವಾಸ ಕಥನ ಎಂತಲೇ ಹೇಳಬಹುದಾದ ಈ ಕೃತಿಯು ಯಾತ್ರಿಕರು, ಛಾಯಾಚಿತ್ರಗಾರರು ಹಾಗೂ ಪ್ರವಾಸಿಗರಿಗೆ ಮಾಹಿತಿಯ ಕೈಪಿಡಿಯೂ ಆಗುತ್ತದೆ.
ಬರಹಗಾರ ಶ್ರೀ ಕೃಷ್ಣ ಎನ್. ಬುಗುಟ್ಯಾಗೋಳ ಅವರು ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲ್ಲೂಕಿನ ರಾಮಪುರದಲ್ಲಿ ಜನಿಸಿದರು. ತಂದೆ ನಾಗಪ್ಪ. ತಾಯಿ ತಂಗೆವ್ವ. ಇಂಗ್ಲಿಷ್ ಸಾಹಿತ್ಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಡಿಕೇರಿಯಲ್ಲಿ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ನಂತದ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯಲ್ಲಿ ಸಹಾಯಕ ನಿಯಂತ್ರಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಓದು ಮತ್ತು ಪ್ರವಾಸ ಇವರ ನೆಚ್ಚಿನ ಹವ್ಯಾಸ. ನಾ ಕಂಡ ಕೈಲಾಸ ಇವರು ರಚಿಸಿದ ಪ್ರವಾಸ ಕಥನ. ...
READ MORE