ಅಮೆರಿಕಾ ಪ್ರವಾಸದ ಕುರಿತು ಸಾಕಷ್ಟು ಪುಸ್ತಕಗಳು ಕನ್ನಡದಲ್ಲಿದೆ. ಆದರೆ ಲ್ಯಾಟಿನ್ ಅಮೆರಿಕಾ ಬಗ್ಗೆ ಬರೆದ ಪುಸ್ತಕ ವಿರಳ.ಅಲ್ಲಿನ ಜನಜೀವನ,ನಿಸರ್ಗದೊಂದಿಗಿನ ಒಡನಾಟ ,ಸಂಸ್ಕೃತಿಕ ಹಾಗೂ ಇತಿಹಾಸದ ಅರಿವು ಹೀಗೆ ಹಲವು ವಿಷಯಗಳನ್ನು ಲೇಖಕರು ವಿವರಿಸಿದ್ದಾರೆ.ಈ ಪ್ರವಾಸ ದಕ್ಷಿಣ ಅಮೆರಿಕದ ತೀರದಿಂದ ಆರಂಭಿಸಿ ಆಂಡೀಸ್ ಪರ್ವತ, ಅಮೇಜಾನ್ ಅರಣ್ಯ ಪ್ರದೇಶ, ಇಂಕಾ ಸಾಮ್ರಾಜ್ಯ, ಮಾಯಾನಗರಿ ಮಾಚುಪಿಚು, ಟಿಟಕಾಕ ಸರೋವರ, ಇಗ್ಲಾಸು ಜಲಪಾತ ಮೊದಲಾದವುಗಳ ಅನುಭವನ್ನು ವಿವರಿಸಲಾಗಿದೆ. ರಿಯೋ ನಗರದಲ್ಲಿ ಪ್ರವಾಸ ಕೊನೆಗೊಳ್ಳುತ್ತದೆ. ಅಮೇಜಾನ್ ಅರಣ್ಯ ಪ್ರದೇಶದಲ್ಲಿ ಬುಡಕಟ್ಟು ಜನಾಂಗ, ಬುಡಕಟ್ಟು ಭಾಷೆಗಳ ಬಗ್ಗೆ ವಿವರಿಸಲಾಗಿದೆ. ಪ್ರಸ್ತುತ ಈ ಪ್ರವಾಸ ಕಥೆಯಲ್ಲಿ ಲೇಖಕರು ತನ್ನ ಅನುಭವಗಳನ್ನೂ ಸುಂದರವಾಗಿ ವಿವರಿಸಿದ್ದಾರೆ.
ಸಾಹಿತಿ, ಲೇಖಕ, ಡಾ. ಜಿ.ಎಸ್.ಶಿವಪ್ರಸಾದ್ ಅವರು ಖ್ಯಾತ ಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಪುತ್ರರು. ಸದ್ಯ, ಇಂಗ್ಲೆಂಡಿನ ಚೆಸ್ಟರ್ ಫೀಲ್ಡ್ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರು. ಇಂಗ್ಲೆಂಡಿನಲ್ಲಿ ‘ಕನ್ನಡ ಬಳಗದ ವೇದಿಕೆ’ ಮೂಲಕ ಕನ್ನಡ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ‘ದಕ್ಷಿಣ ಅಮೆರಿಕಾ ಒಂದು ಸುತ್ತು’ (ಪ್ರವಾಸ ಕಥನ), ಇಂಗ್ಲೆಂಡಿನಲ್ಲಿ ಕನ್ನಡಿಗ (ಕನ್ನಡ-ಇಂಗ್ಲಿಷ್ ಕವನಗಳ ಸಂಕಲನ) ಹಾಗೂ ಪಯಣ (ಕಾದಂಬರಿ) . ...
READ MORE