ಪಯಣಿಗ

Author : ವೈ.ಬಿ. ಕಡಕೋಳ

Pages 288

₹ 250.00




Year of Publication: 2019
Published by: ಎಸ್.ಎಲ್.ಎನ್. ಪಬ್ಲಿಕೇಷನ್ಸ್
Address: # 3437, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀನಗರ, ಬನಶಂಕರಿ 2ನೇ ಹಂತ, ಬೆಂಗಳೂರು-560028

Synopsys

ಲೇಖಕ ವೈ.ಬಿ. ಕಡಕೋಳ ಅವರ ಪ್ರವಾಸ ಕಥನ-ಪಯಣಿಗ. 47 ಏಳು ಅಧ್ಯಾಯಗಳಲ್ಲಿ ಕಥನ ಮುಂದುವರಿದಿದೆ. ಬೆಳಗಾವಿಯಲ್ಲಿ ಸ್ವಾಮಿ ವಿವೇಕಾನಂದರು, ಪ್ರಕೃತಿ ಕಾವ್ಯದ ಸೊಬಗಿನ ಚಿಕ್ಕ ಸೋಮೇಶ್ವರ ಕ್ಷೇತ್ರ, ಕಾಂಕ್ರಿಟ್ ನಾಡಿನ ನಡುವೆ ಶತಮಾನದ ಉದ್ಯಾನವನ, ಸುಂದರ ವಿಹಾರಧಾಮವಾದ ಬೆಳಗಾವಿ ಕೋಟೆ ಕೆರೆ, ಪ್ರವಾಸಿಗರ ನೆಚ್ಚಿನ ತಾಣ ಬೆಳಗಾವಿ, ಸವದತ್ತಿ ತಾಲೂಕಿನ ಪ್ರವಾಸಿ ತಾಣಗಳು, ಮಕ್ಕಳ ಮನರಂಜನೆಯ ಪ್ರವಾಸಿತಾಣ ದಾಂಡೇಲಿಯ ಇಕೋಪಾರ್ಕ್ , ಧಾರವಾಡ ಸೊಬಗ ಸವಿಯ ಬನ್ನಿ, ಗೊಡಚಿಮಲ್ಕಿ ಜಲಧಾರೆ, ಭಾರತದ ನಯಾಗರ ಗೋಕಾಕ ಪಾಲ್ಸ್, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಐತಿಹಾಸಿಕ ದೇವಾಲಯಗಳ ಬೀಡು ಹೂಲಿ, ಹೊಸಪೇಟಿಯಲ್ಲೊಂದು ವಿಶಿಷ್ಟ ಉದ್ಯಾನವನ, ಕಿಲ್ಲಾ ತೋರಗಲ್, ಕಿತ್ತೂರು, ಶಿವರಾಮ ಕಾರಂತರ ನೆನಪು ಕೋಟಾದ ಥೀಮಪಾರ್ಕ, ಕುಪ್ಪಳಿಯ ಕವಿ ಶೈಲದ ಮರೆಯಲಾಗದ ನೆನಪುಗಳು, ಪಂಚನದಿಗಳ ಉಗಮಸ್ಥಾನ ಪ್ರೇಮಿಗಳ ಸ್ವರ್ಗ ಮಹಾಬಳೇಶ್ವರ, ಮಹಾಕೂಟ, ಮಂಜರಾಬಾದ್‍ಕೋಟೆ, ಮೌಳಂಗಿ ಇಕೋಪಾರ್ಕ್ ಮೈಸೂರು ರೈಲು ಮ್ಯೂಜಿಯಂ, ನಲಿಯುತ ಬನ್ನಿ ನವಿಲುತೀರ್ಥಕೆ, ನೃಪತುಂಗಬೆಟ್ಟ ಧರೆಗಿಳಿದ ಸ್ವರ್ಗ, ಸರ್ವಧರ್ಮ ಸಮನ್ವಯ ತಾಣ ಓಂಕಾರ ಹಿಲ್ಸ, ಪರಸಗಡಕೋಟೆ, ಪ್ರಕೃತಿ ಕಾವ್ಯದ ತಾಣ ಸಂಜೀವಿನಿ ಉದ್ಯಾನವನ, ಬಾರೋ ಸಾಧನಕೇರಿಗೆ, ಮಳೆಯಜಲರಾಶಿಯ ಹೊತ್ತಜಲಧಾರೆ, ಧಾರವಾಡ ಪ್ರಾದೇಶಿಕ ವಿಜ್ಞಾನಕೇಂದ್ರ, ಸೊಗಲಸೋಮೇಶ್ವರ ದೇವಾಲಯ, ಬೆಳಗಾವಿ ಸುವರ್ಣಸೌಧ, ಸೈಕ್ಸ ಪಾಯಿಂಟ್ ಅಂಬಿಕಾನಗರ, ಉಳವಿ, ಹುಬ್ಬಳ್ಳಿಯ ಉಣಕಲ್ ಕೆರೆ, ಉತ್ಸವ್‍ರಾಕ್ ಗಾರ್ಡನ್, ತಪಸ್ವಿಗಳ ತಾಣ ವರವಿಕೊಳ್ಳ, ಚುಳಕಿ ಗುಹೆಗಳು ಹೀಗೆ ಓದುಗರಿಗೆ ನೈಸರ್ಗಿಕ ತಾಣಗಳು, ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಹಾಗೂ ಭೌಗೋಳಿಕ ಮಹತ್ವ ಇತ್ಯಾದಿಗಳ ವಿವರಣೆ ಒಳಗೊಂಡ ಕೃತಿ ಇದು.

About the Author

ವೈ.ಬಿ. ಕಡಕೋಳ

ಲೇಖಕ ವೈ.ಬಿ.ಕಡಕೋಳ ಅವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯವರು.ಸವದತ್ತಿಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ವಿಕಲಚೇತನ ಮಕ್ಕಳ ಸಂಪನ್ಮೂಲ ಶಿಕ್ಷಕರಾಗಿದ್ದಾರೆ. ಸರಕಾರಿ ಪ್ರಾಥಮಿಕ ಶಾಲೆ ತೆಗ್ಗಿಹಾಳದಲ್ಲಿ 17 ವರ್ಷ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಂತರ ಮೂರು ವರ್ಷಗಳ ಕಾಲ ಅರ್ಟಗಲ್ ಕ್ಲಸ್ಟರ್ ಸಿ.ಆರ್.ಪಿ ಯಾಗಿ. ನಿಯೋಜಿತ ಬಿ.ಆರ್.ಪಿ ಯಾಗಿ ಮೂರು ವರ್ಷ ಕಾಲ ಸೇವೆ ಸಲ್ಲಿಸಿದ್ದಾರೆ. ಮುನವಳ್ಳಿ: ಒಂದು ಸಾಂಸ್ಕೃತಿಕ ಅಧ್ಯಯನ ವಿಷಯವಾಗಿ ಅವರು ಹಂಪಿಯ ಕನ್ನಡ ವಿ.ವಿ.ಗೆ ಸಂಶೋಧನಾ ಪ್ರಬಂಧ ಮಂಡಿಸಿ ಎಂ.ಫಿಲ್ ಪದವಿ ಪಡೆದಿದ್ದಾರೆ.  ಕೃತಿಗಳು:  ಸಾವು ಬದುಕಿನ ನಡುವೆ (ಕಥಾ ಸಂಕಲನ) ಸಂಸ್ಕಾರ ಫಲ (ಮಕ್ಕಳ ಕಥಾ ಸಂಕಲನ) ಚರಿತ್ರೆಗೊಂದು ...

READ MORE

Related Books