ರಾಜಸ್ಥಾನದ ಪಶ್ಚಿಮಕ್ಕಿರುವ ಜೈಸಲ್ಮೇರ್ ನಿಂದ ಅದರ ರಾಜಧಾನಿಯಾದ ಜೈಪುರದವರೆಗಿನ ಮುಖ್ಯ ತಾಣಗಳ ವಿವರಗಳನ್ನು ‘ಅರಮನೆಗಳ ರಾಜ್ಯದಲ್ಲಿ’ಕೃತಿಯಲ್ಲಿ ಚಿತ್ರಿಸಿದ್ದಾರೆ ಲೇಖಕರು. ಕೃತಿಗೆ ಬೆನ್ನುಡಿ ಬರೆದಿರುವ ನಾರಾಯಣ ಮಾಳ್ಕೋಡ್ ಅವರು “ಭಾರತದ ವರ್ಣರಂಜಿತ ರಾಜ್ಯವಾದ ರಾಜಸ್ಥಾನದ ಕುರಿತ ಪ್ರವಾಸ ಕಥನವಿದು. ಐತಿಹಾಸಿಕ ಸ್ಥಳಗಳಾದ ಜೈಸಲ್ಮೇರ್, ಜೋಧ್‌ಪುರ್,ಉದಯಪುರ, ಜೈಪುರ, ಚಿತ್ತೋಢಗಢ, ಅಜಮೇರ್‌ನಂಥ ವಿಶ್ವವಿಖ್ಯಾತ ಸ್ಥಳಗಳಲ್ಲಿ ತಾವು ಕಂಡ ಅದ್ಭುತ ರಮ್ಯ ಐತಿಹಾಸಿಕ ತಾಣಗಳೆಲ್ಲವನ್ನೂ ಲೇಖಕರು ತಲಸ್ಪರ್ಶಿಯಾಗಿ ಇಲ್ಲಿ ವಿವರಿಸಿದ್ದಾರೆ. ಹೀಗೆ ವಿವರಣೆ ನೀಡುತ್ತಲೇ ಆಯಾ ಸಂಸ್ಥಾನಗಳ ಚರಿತ್ರೆಯ ಸಿಂಹಾವಲೋಕನವೂ ನಡೆದಿದೆ. ರಾಜಸ್ಥಾನವನ್ನು ಕುರಿತಂತೆ ಕನ್ನಡದಲ್ಲಿ ಪ್ರಕಟವಾಗಿರುವ ಮೊದಲ ವಿಸ್ತೃತ ಪ್ರವಾಸ ಕಥನವಿದು.ಇದನ್ನು ಓದುತ್ತಿದ್ದಂತೆ ಆ ರಾಜ್ಯದಲ್ಲಿ ಸಂಚರಿಸಿದ ಅನುಭವವಾಗುತ್ತದೆ” ಎಂದು ಕೃತಿ ಕುರಿತು ವಿವರಿಸಿದ್ದಾರೆ.
©2024 Book Brahma Private Limited.