‘ಥೇಮ್ಸ್‌ನಿಂದ ಟೈಬರ್‌ವರೆಗೆ’ ವೆಂಕಟೇಶ ಮಾಚಕನೂರ ಅವರ ಪ್ರವಾಸಕಥನವಾಗಿದೆ. ಪ್ರವಾಸ ಕಥನಗಳನ್ನು ಒಂದೇ ವರ್ಗದವೆಂದು ಹೆಸರಿಸಿದರೂ ಪ್ರತಿಯೊಬ್ಬ ಪ್ರವಾಸಿಯ ಅನುಭವಗಳು ಖಂಡಿತವಾಗಿಯೂ ಬೇರೆ ಬೇರೆಯಾಗಿಯೇ ಇರುತ್ತದೆ ಎಂಬುದನ್ನು ಈ ಪ್ರವಾಸಕಥನ ತಿಳಿಸಿಕೊಡುತ್ತದೆ.
ಹೊಸತು 2003- ಮಾರ್ಚ್
ಒಬ್ಬ ಪ್ರವಾಸಿಯಾಗಿ ಯುರೋಪ್ ಸ೦ದರ್ಶಿಸಿದ ಶ್ರೀ ಮಾಚಕನೂರ ಅವರು ತಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಪ್ರವಾಸ ಕಥನಗಳನ್ನು ಒಂದೇ ವರ್ಗದವೆಂದು ಹೆಸರಿಸಿದರೂ ಪ್ರತಿಯೊಬ್ಬ ಪ್ರವಾಸಿಯ ಅನುಭವಗಳು ಖಂಡಿತವಾಗಿಯೂ ಬೇರೆ ಬೇರೆಯಾಗಿಯೇ ಇರುತ್ತವೆ. ಇಲ್ಲಿನ ನಿರೂಪಣೆಯಲ್ಲಿ ಚಾರಿತ್ರಿಕ-ಭೌಗೋಳಿಕ ಅಂಶಗಳಿಗೆ ಹೆಚ್ಚು ಒತ್ತು ನೀಡಲಾಗಿದ್ದು ಸುಮಾರು ಹನ್ನೊಂದು ವಿದೇಶೀ ನಗರಗಳ ಸಂಕ್ಷಿಪ್ತವಾದ ಅಚ್ಚುಕಟ್ಟಾದ ವಿವರಣೆಯಿದೆ. ವಿದೇಶವೆಂದರೆ ಬೆರಗಿನಿಂದ ಮೈಯೆಲ್ಲಾ ಕಿವಿಯಾಗಿ ಆಲಿಸುವವರಿಗೊಂದು ಹೊಸ ಪ್ರವಾಸ ಕಥನ.
©2024 Book Brahma Private Limited.