ಸುಬ್ರಾವ ಕುಲಕರ್ಣಿ ಅವರ ಮೊದಲ ಪ್ರವಾಸ ಕಥನ-ಸಾಗರದ ಈಚೆ ಆಚೆ. ತಮ್ಮ ಬಾಲ್ಯದಿಂದಲೂ ಕಂಡ ಸುತ್ತಮುತ್ತಲಿನ ಒಳನೋಟ, ಪರಿಸರ ಮುಂತಾದವುಗಳನ್ನು ನವಿರಾಗಿ ಚಿತ್ರಿಸಿದ್ದಾರೆ. ಕರ್ನಾಟಕ ಹಾಗೂ ದೇಶದ ಹಲವು ಭಾಗಗಳನ್ನು ತಾವು ಕಂಡ ಅನುಭವಕ್ಕೆ ಪರಿಸರದ-ಗೆಳೆಯರ ಸಂಪರ್ಕದ ಮುತ್ತನ್ನು ಸೇರಿಸಿರುವುದರಿಂದ ಈ ಸುಲಲಿತ ಪ್ರವಾಸ ಕಥನ ಓದುಗರನ್ನು ಆಪ್ತತೆಗೆ ತೆಗೆದುಕೊಳ್ಳುತ್ತವೆ.
ಸಾಹಿತಿ, ಕತೆಗಾರ, ನಾಟಕಕಾರರಾಗಿ ಕನ್ನಡ ನಾಡಿಗೆ ಪರಿಚಿತರಾದ ಸುಬ್ರಾವ ಕುಲಕರ್ಣಿ ಅವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಬಸಿಡೋಣಿಯವರು. ಹೊಸ ಜನರ ಸಂಸ್ಕೃತಿ-ಪರಿಸರವನ್ನು ಅರಿಯುವ ತುಡಿತವಿದ್ದು ಪೂರಕವಾಗಿ ಸುಬ್ರಾವ ಅವರು ದೇಶ ವಿದೇಶಗಳನ್ನು ಭೇಟಿ ನೀಡುತ್ತಾರೆ. ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಲಿನಲ್ಲಿ ಉದ್ಯೋಗ ಪ್ರಾರಂಭಿಸಿದರು. ನಂತರ ಉದ್ಯೋಗ ಮತ್ತು ತರಬೇತಿ ಇಲಾಖೆಯಲ್ಲಿ (ಐ.ಟಿ.ಐ) ವಿವಿಧ ಹುದ್ದೆಗಳಲ್ಲಿ ಸೇವೆಗೈದು ಪ್ರಾಂಶುಪಾಲರಾಗಿ 1999ರಲ್ಲಿ ಸೇವೆಯಿಂದ ನಿವೃತ್ತಿಯಾದರು. ಸಾಹಿತ್ಯ, ನಾಟಕ, ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ. ‘ತೃಪ್ತಿ, ರೇವೆ, ಮಲಪ್ರಭೆ, ಮದನಿಕೆ, ರಾಗದರ್ಬಾರಿ, ಸಂತೆ, ಭಾಗೀರಥಿ ಚಾಳ, ಪುಲ್ವಾಮ’ ಅವರ ಕಥಾ ಸಂಕಲನಗಳು. ‘ಸಾಗರದ ಈಚೆ-ಆಚೆ’ ಅವರ ...
READ MORE