ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತ ಅವರ ಪ್ರವಾಸ ಕಥನ-ಅಬೂವಿಂದ ಬರಾಮಕ್ಕೆ. ಕಥೆ, ಕಾದಂಬರಿ, ವಿಜ್ಞಾನ, ಕಲೆ, ಚಿತ್ರಕಲೆ, ವಾಸ್ತುಶಿಲ್ಪ, ಮಕ್ಕಳಿಗಾಗಿ ವಿಜ್ಞಾನ ಹೀಗೆ ಹತ್ತು ಹಲವು ವಲಯಗಳಲ್ಲಿ ಕೃಷಿ ಮಾಡಿರುವ ಲೇಖಕರು ಪ್ರವಾಸ ಕಥನ ದಲ್ಲೂ ಉತ್ತಮ ಸಾಹಿತ್ಯ ಕೃತಿಗಳನ್ನು ನೀಡಿದ್ದು ಆ ಪೈಕಿ -‘ಅಬೂವಿಂದ ಬರಾಮಕ್ಕೆ’ ಎಂಬುದು ಒಂದು ಪ್ರವಾಸ ಕಥನ. ರಾಜಸ್ತಾನದ ಅಬೂ ಎಂಬ ಸ್ಥಳದಿಂದ ಬರಾಮತನಕ -ತಮ್ಮ ಪ್ರವಾಸದ ವಿಚಾರಗಳನ್ನು ವ್ಯಕ್ತ ಮಾಡಿದ್ದಾರೆ. ದೆಹಲಿ, ಆಗ್ರ, ರಾಜಸ್ಥಾನದ ಜಯಪುರ, ಕೊಲ್ಕತ್ತಾ, ಕಾಶಿ, ಮೂಲಕ ಓಡಿಸ್ಸಾದ ಬರಾಮವರೆಗೂ ಅವರು ಕಂಡ, ದೃಶ್ಯಗಳ, ಪಡೆದ ಮಾಹಿತಿಗಳ ಕುರಿತ ಒಳನೋಟಗಳಿವೆ. ಐತಿಹಾಸಿಕ ಸಂಗತಿಗಳ ಮೇಲೂ ಅವರು ಸ್ಪಂದನೆ ಕಾಣಬಹುದು. ತಾಜಮಹಲ್, ಅಜ್ಮೀರ ದರ್ಗಾದ ಮಹಾದ್ವಾರ, ಅಬೂ ದೇವಾಲಯ, ನವರಂಗ, ದೆಹಲಿಯ ಪಾರ್ಲಿಮೆಂಟ್ ಸೀಮ್ಲಾದ ನೈಸರ್ಗಿಕ ಸೌಂದರ್ಯ, ಫತ್ತೇಪುರ ಸಿಕ್ರಿಯಲ್ಲಿರುವ ಪಂಚಮಹಲು, ಕಾಶಿಯ ಹನುಮಾನ್ ಘಾಟ್ ಹೀಗೆ ಪಟ್ಟು ಬೆಳೆಯುತ್ತಾ ಹೋಗಿದೆ. ಕಥನ ಶೈಲಿ, ಸರಳ ಭಾಷೆ, ವೈವಿಧ್ಯಮಯ ದೃಷ್ಟಿಕೋನ, ವಿಶ್ಲೇಷಣೆಯ ತೀಕ್ಷಣತೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕೃತಿಯು ಓದುಗರ ಗಮನ ಸೆಳೆಯುತ್ತದೆ.
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಹರ್ಷ ಪ್ರಕಟಣಾಲಯವು 1950ರಲ್ಲಿ (ಪುಟ: 147) ಪ್ರವಾಸ ಕಥನದ ಈ ಕೃತಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.
©2024 Book Brahma Private Limited.