‘ಅಮ್ ಸ್ಟರ್ ಡ್ಯಾಮ್ ನಿಂದ ಅವಿಗ್ನಾನ್ ಕ್ಕೆ’ ಲೇಖಕ ಆಗುಂಬೆ ಎಸ್. ನಟರಾಜ್ ಅವರ ಪ್ರವಾಸ ಕಥನ. ಪಶ್ಚಿಮ ಯುರೋಪ್ ನ ಪ್ರಸಿದ್ಧ ಐತಿಹಾಸಿಕ ನಗರಗಳು ವಿಶ್ವದ ಇತಿಹಾಸದ ಪುಟಗಳಲ್ಲಿ ತಮ್ಮದೇ ಆದ ವಿಶಿಷ್ಟ, ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಹಾಗೂ ಸಾಹಿತ್ಯ ಬೆಳವಣಿಗೆಗೆ ಸಾಕ್ಷಿಯಾಗಿ ನಿಂತಿವೆ.
ಈ ನಗರಗಳಲ್ಲಿ ಅನೇಕ ಅದ್ಭುತ ಅರಮನೆಗಳು, ಸೌಧಗಳು, ಚರ್ಚ್ ಗಳು ನಿರ್ಮಿಸಲ್ಪಟ್ಟಿದ್ದರೆ, ಅವು ಇತಿಹಾಸ ಪ್ರಸಿದ್ಧ ರಾಜ ಮಹಾರಾಜರು, ರಾಜಕುಮಾರರು, ಸಾಹಿತಿಗಳು, ಕವಿಗಳು, ಜ್ಞಾನಿ, ವಿಜ್ಞಾನಿಗಳು, ತತ್ವಜ್ಞಾನಿಗಳು, ಕಲಾಕಾರರು, ಶಿಲ್ಪಕಲಾಕಾರರು, ವಾಸ್ತುಶಿಲ್ಪಿಗಳು, ವಿಶ್ವವಿದ್ಯಾಲಯಗಳು, ವಿದ್ಯಾಕೇಂದ್ರಗಳಿಗೆ ಪ್ರಸಿದ್ಧಿಗೊಂಡಿವೆ. ಈ ನಗರಗಳು ಯೂರೋಪ್ ನ ಇತಿಹಾಸದಲ್ಲಿ ಬಹು ಮುಖ್ಯ ಪಾತ್ರವಹಿಸಿ ಪ್ರಖ್ಯಾತವಾಗಿವೆ. ಅವುಗಳ ಸಂಕ್ಷಿಪ್ತ ವಿವರಣೆ ಈ ಗ್ರಂಥದಲ್ಲಿದೆ.
©2024 Book Brahma Private Limited.