‘ನಾ ಕಂಡ ಬ್ರಝೀಲ್’ ಸಿ.ನಾಗಭೂಷಣ ಅವರ ಪ್ರವಾಸಕಥನವಾಗಿದೆ. ಲೇಖಕರು ಕೈಗೊಂಡ ದಕ್ಷಿಣ ಅಮೆರಿಕದ ಬಹು ದೊಡ್ಡ ದೇಶ ಬ್ರಝಿಲ್ ಪ್ರವಾಸದ ಅನುಭವಗಳು ಸೊಗಸಾಗಿ ಮೂಡಿಬಂದಿವೆ. ಲೇಖಕರ ನಿರೂಪಣಾ ಚಾತುರ್ಯ, ಕಥೆ ಹೇಳುವಂತಹ ಶೈಲಿಯಿಂದಾಗಿ ನಾವೂ ಅವರ ಜತೆಗೇ ಪ್ರವಾಸ ಮುಗಿಸಿ ಬಂದಂತಹ ಅಪೂರ್ವ ಅನುಭವ ನೀಡುತ್ತದೆ. ಆ ದೇಶದ ಸಾಂಸ್ಕೃತಿಕ ಜಗತ್ತೊಂದು ನಮ್ಮ ಮುಂದೆ ಬಂದು ಪರಿಚಯಿಸಿಕೊಳ್ಳ ತೊಡಗುತ್ತದೆ. ಅನ್ಯದೇಶೀಯರ ನಾಗರಿಕತೆ ತಿಳಿದುಕೊಳ್ಳಲು ಒಂದು ಉತ್ತಮ ಕೃತಿ.