ಒಳನಾಡಿನ ಒಡನಾಟ ಸಿದ್ದಗಂಗಯ್ಯ ಹೊಲತಾಳು ಅವರ ಕೃತಿಯಾಗಿದೆ. 'ಒಳನಾಡಿನ ಒಡನಾಟ'ವನ್ನು ಅರತ್ತೆಂಟು ವರ್ಷದ ಯುವ ಮನಸ್ಸೊಂದು, ಕೇವಲ ಹದಿನೈದು ದಿನಗಳ ಸಾಹಸಮಯ ಮತ್ತು ನಿರಂತರ ಪಯಣದ ಮೂಲಕ ಕರ್ನಾಟಕದ ಮೂಲೆಮೂಲೆಗಳಿಗೆ ಮಿಂಚಿನಂತೆ ಸಂಚರಿಸಿ, ಎಲೆಮರೆಯಲ್ಲಿರುವ ಅಪೂರ್ವ ಕೃಷಿಕರನ್ನು ಭೇಟಿಮಾಡಿ, ತಮ್ಮ ಅನುಭವವನ್ನು ಲಿಖಿತ ರೂಪದಲ್ಲಿ ದಾಖಲಿಸಿದ ಒಂದು ಅಪೂರ್ವ ಕೊಡುಗೆಯೆನ್ನಬಹುದು. ಇಲ್ಲಿ ಲೇಖಕರು, ಕರ್ನಾಟಕದ ಹಲವು ಜಿಲ್ಲೆಗಳ ಒಳಹೊಕ್ಕು ತಾವು ಕಂಡಂತಹ ವಿಭಿನ್ನ ಬೆಳೆಗಳು, ಸಾಹಸಿ ಕೃಷಿಕರು, ಸಹೃದಯಿ ಗ್ರಾಮೀಣ ಜನರು, ಅಲ್ಲಿನ ಶಾಲಾ-ಕಾಲೇಜುಗಳು, ಸಂಘ ಸಂಸ್ಥೆಗಳು, ಸಮಾಜ ಸೇವಕರು, ಬರಹಗಾರರು, ಐತಿಹಾಸಿಕ ಸ್ಥಳಗಳು, ಒಂದಿಷ್ಟು ಆಪ್ತ ಮಾತುಕತೆಗಳು, ಸಂದರ್ಶನಗಳು, ಇತ್ಯಾದಿಗಳನ್ನು ಓದುಗರೊಂದಿಗೆ ಬಹಳ ಸ್ವಾರಸ್ಯಪೂರ್ಣವಾಗಿ ಹಂಚಿಕೊಂಡಿದ್ದಾರೆ.
ಲೇಖಕ ಸಿದ್ದಗಂಗಯ್ಯ ಹೊಲತಾಳು ಮೂಲತಃ ತುಮಕೂರಿನವರು. (ಜನನ: 1954 ನವೆಂಬರ್ 11 ) ಕುರಂಕೋಟೆಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಸಿದ್ಧಗಂಗಾಮಠದಲ್ಲಿ ಹೈಸ್ಕೂಲ್-ಪಿಯುಸಿ , ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಬಿ.ಎ, ಮೈಸೂರಿನ ಸೋಮಾನಿ ಇನ್ ಸ್ಟಿಟ್ಯೂಟ್ ಆಫ್ ಎಜುಕೇಷನ್ ನಲ್ಲಿ ಬಿ.ಇಡಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಡಿ.ಲಿಟ್ ಪದವಿ ಪಡೆದಿರುತ್ತಾರೆ. ಯಲ್ಲಾಪುರ ನಾಗರಿಕ ವೇದಿಕೆ ಹಾಗೂ ಆದರ್ಶ ಪರಿಸರ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. 1979 ರಲ್ಲಿ ಮೈಸೂರಿನ ಸರಸ್ವತಿಪುರಂನ ಜೆಎಸ್‌ಎಸ್ ಬಾಲಕಿಯರ ಹೈಸ್ಕೂಲ್ ನಲ್ಲಿ ಅಧ್ಯಾಪಕರಾಗಿ, ನಂತರ (1979 ರಿಂದ ಜೂನ್ 1988 ) ಚಿಕ್ಕಮಗಳೂರು ...
READ MORE