ಡಾ. ಶಿವರಾಮ ಕಾರಂತರ ಪ್ರವಾಸ ಕಥನ-ಅಪೂರ್ವ ಪಶ್ಚಿಮ. ಕಾರಂತರು ಅಲೆದ, ನೋಡಿದ, ಓದಿದ ಸ್ಥಳಗಳ ಬಗ್ಗೆ ದಕ್ಕಿದಷ್ಟನ್ನು ಈ ಪುಸ್ತಕದಲ್ಲಿ ಸೆರೆಹಿಡಿದಿದ್ದಾರೆ. ಪಶ್ಚಿಮ ದೇಶಗಳ ಪ್ರವಾಸಿ ತಾಣಗಳಾದ ಇಂಗ್ಲೆಂಡ್, ಲಂಡನ್, ಬ್ರಿಟನ್, ಹಾಲೆಂಡ್, ಬೆಲ್ಜಿಯಂ, ರೋಮ್ ಇತ್ಯಾದಿ ಹೀಗೆ ಕಂಡ ಎಲ್ಲ ದೇಶಗಳ ಸಂಸ್ಕೃತಿ, ವಿಶೇಷತೆಗಳ ಮೇಲೆ ಬೆಳಕು ಚೆಲ್ಲಿದ ಕೃತಿ.
ತೇಲುವ ಅಮರಾವತಿ ಎಂಬ ಅಧ್ಯಾಯದಡಿ ಹಡಗಿನ ಪ್ರಯಾಣದ ಚಿತ್ರಣವಿದೆ. ಇಂಗ್ಲೆಂಡ್, ಲಂಡನ್, ಬ್ರಿಟನ್, ಹಾಲೆಂಡ್, ಬೆಲ್ಜಿಯಂ, ರೋಮ್ ಹೀಗೆ ತಾವು ಸಂಚರಿಸಿದ ವಿದೇಶಗಳ ವಿದ್ಯಮಾನಗಳನ್ನು ವಿವರಿಸಿದ್ದಾರೆ. ನಂತರ ಅವರು ಮರಳಿ ದೇಶಕ್ಕೆ ಬರುವ ಚಿತ್ರಣವೂ ಆಪ್ತವೆನಿಸುತ್ತದೆ.
ಪುತ್ತೂರಿನ ಹರ್ಷ ಪ್ರಕಟಣಾಲಯವು 1954ರಲ್ಲಿ (ಪುಟ: 338) ಈ ಪ್ರವಾಸ ಕಥನವನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE