‘ಜನ ಗಣ ಮನ’ ಲೇಖಕ ಎಚ್.ಎಸ್. ರಾಘವೇಂದ್ರರಾವ್ ಅವರು ಬಂಗಾಳ ,ಮತ್ತು ಒರಿಸ್ಸಾ ರಾಜ್ಯಗಳಿಗೆ ಪ್ರವಾಸ ಕೈಗೊಂಡು ಬರೆದ ಕಥನ ಕೃತಿ. ಕೃತಿಗೆ ಬೆನ್ನುಡಿ ಬರೆದಿರುವ ಜಿ.ಎಸ್. ಶಿವರುದ್ರಪ್ಪ ಅವರು, ‘ಪ್ರವಾಸ ಸಾಹಿತ್ಯ ಇತ್ತಿಚೆಗೆ ಕನ್ನಡದಲ್ಲಿ ರೂಪುಗೊಳ್ಳುತ್ತಿರುವ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರವಾಗಿದೆ. ತುಂಬ ಆಕರ್ಷಕವಾದ ಈ ಪ್ರಕಾರ, ಈಗಾಗಲೇ ಹಲವರ ಕೈಯಲ್ಲಿ ಕೇವಲ ಹರಟೆಯಾಗುತ್ತ, ಅಥವಾ ದೈನಂದಿನ ಅನುಭವ-ಅನಿಸಿಕೆಗಳ ವರದಿಯಾಗುತ್ತ, ಇಲ್ಲವೆ ನೀರಸ ಉಪನ್ಯಾಸವಾಗುತ್ತ ಪರಿಣಮಿಸಿದೆ ಎಂಬುದು ಅಪರಿಚಿತವಾದ ಸಂಗತಿಯೇನಲ್ಲ. ಆದರೆ, ಪ್ರವಾಸದ ಅತ್ಯಂತ ಆಕರ್ಷಕವೂ ದಟ್ಟವೂ ಆದ ಅನುಭವಗಳನ್ನು, ತಕ್ಕ ವಿವೇಚನೆಯಿಂದ, ಎಚ್ಚರದಿಂದ ಮತ್ತು ಕಲಾತ್ಮಕತೆಯಿಂದ ನಿರ್ವಹಿಸಿದ ಕೃತಿಗಳು ತೀರಾ ವಿರಳವೆಂದೇ ಹೇಳಬೇಕು. ರಾಘವೇಂದ್ರರಾವ್ ಅವರ ‘ಜನ ಗಣ ಮನ’, ಇಂಥ ವಿರಳ ಕೃತಿಗಳ ಸಾಲಿಗೆ ಖಂಡಿತವಾಗಿಯೂ ಸೇರುವಂಥವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.…
ಮೂಲತಃ ಚಿತ್ರದುರ್ಗದವರಾದ ರಾಘವೇಂದ್ರರಾವ್ ಅವರು (ಜನನ 1948) ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದು ನಿವೃತ್ತರಾದವರು. ಕುವೆಂಪು, ಬೇಂದ್ರೆ, ಪು.ತಿ.ನ. ಅವರ ಕಾವ್ಯ ಕುರಿತು ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದಿರುವ ಅವರು ಕೆಲಕಾಲ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಹಂಪಿಯಲ್ಲಿ ಕರ್ನಾಟಕ ವಿಶ್ವಕೋಶದ ಸಂಪಾದಕರಾಗಿದ್ದ ರಾಘವೇಂದ್ರರಾವ್ ಅವರ ವಿಮರ್ಶಾ ಕೃತಿಗಳು ‘ವಿಶ್ಲೇಷಣೆ’, ‘ನಿಲುವು’, ‘ಹುಡುಕಾಟ’, ‘ಪ್ರಗತಿಶೀಲತೆ, ‘ಹಾಡೆ ಹಾದಿಯ ತೋರಿತು’. ‘ಬಾಲ ಮೇಧಾವಿ’ ಎಂಬ ಜರ್ಮನ್ ಕತೆಗಳ ಅನುವಾದ ಸಂಕಲನ ಹಾಗೂ ‘ಜನಗಣಮನ’ ಎಂಬ ಲವಲವಿಕೆಯ ಪ್ರವಾಸ ಕಥನ ಪ್ರಕಟಿಸಿದ್ದಾರೆ. ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರಾಗಿರುವ ...
READ MOREಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ 1989