ಪ್ರವಾಸವನ್ನು ಸ್ವತಃ ಮಾಡುವುದು, ಇನ್ನೊಬ್ಬರ ಪ್ರವಾಸದ ಅನುಭವಗಳನ್ನು ಕೇಳುವುದು ಮತ್ತು ಪ್ರವಾಸದ ಕಥನಗಳುನ್ನು ಓದುವುದು - ಇವೆಲ್ಲವೂ ನಮ್ಮ ಮನೋಪ್ರಪಂಚವನ್ನು ವಿಸ್ತಾರಗೊಳಿಸುತ್ತದೆ. ಈ ಕೃತಿಯಲ್ಲಿ ಹಲವು ಪ್ರಸಿದ್ಧ ಪ್ರವಾಸಕಥನಗಳಿಂದ ಆಯ್ದ ಭಾಗಗಳ ಅವಲೋಕನವಿದೆ, ಲೇಖಕರೇ ಕೈಗೊಂಡ ಪ್ರವಾಸಗಳ ಅನುಭವಗಳಿವೆ, ಪ್ರವಾಸಿಗರಿಗೆ ಉಪಯುಕ್ತ ಸಲಹೆ ಸೂಚನೆಗಳಿವೆ. ಆರೋಗ್ಯ ಮತ್ತು ಮನೋವಿಜ್ಞಾನದ ಕುರಿತು ವಿಶೇಷ ಮಾಹಿತಿಗಳಿವೆ. ವ್ಯಕ್ತಿತ್ವ ವಿಕಸನಕ್ಕಾಗಿ ಪ್ರವಾಸಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆಯೂ ವಿವರಗಳಿವೆ. ಪ್ರವಾಸಿಗರಿಗೆ “ನಿಮ್ಮ ಪಯಣ ಸುಗಮವಾಗಲಿ“ ಈ ಪುಸ್ತಕ ಒಂದು ಉಪಯುಕ್ತ ಮಾರ್ಗದರ್ಶಿ.
ವೈದ್ಯಕೀಯ ಸಾಹಿತ್ಯ ರಂಗ, ಭರತನಾಟ್ಯ ಕಲಾವಿದೆಯಾಗಿ ಹೆಸರು ಗಳಿಸಿರುವ ಪವಿತ್ರಾ ಕೆ.ಎಸ್ ಅವರು ಮೂಲತಃ ಶಿವಮೊಗ್ಗದವರು. ಆರೋಗ್ಯ ಸಲಹೆಗಳಿಂದ ಉನ್ನತ ಸ್ಥಾನ ಗಳಿಸಿರುವ ಅವರು ವಿಚಾರ ಸಾಹಿತ್ಯದಲ್ಲೂ ಆಸಕ್ತರು. 11ನೇ ವಯಸ್ಸಿನಲ್ಲಿ ಅಖಿಲ ಭಾರತ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಉಪಾಧ್ಯಕ್ಷೆಯಾಗಿದ್ದ ಕೀರ್ತಿ ಅವರದು. ’ಮನ-ಮನನ, ನೀವು ಮತ್ತು ನಿಮ್ಮ ಸಂಬಂಧಗಳು, ಸಿ.ಜಿ.ಯೂಂಗ್, ಓ ಸಖಿ ನೀನು ಸಖಿಯೆ, ಪರಿಪೂರ್ಣ ವ್ಯಕ್ತಿತ್ವ ಇಂದಿನ ಮಹಿಳೆಯ ಮಾನಸಿಕ ಸವಾಲುಗಳು, ಗೀಳು ಖಾಯಿಲೆ, ಮಗು-ಮನಸು’ ಅವರ ಕೃತಿಗಳು. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಬಹುಮಾನ, ಕಸಾಪ ಧರಣೇಂದ್ರಯ್ಯ ಮನೋವಿಜ್ಞಾನ ದತ್ತಿ ...
READ MORE