ರೀ ಮೇಡ್ ಇನ್ ಅಮೆರಿಕ-ನಿರುದ್ಯೋಗಿ ಪರದೇಶಿಯ ದೈನಿಕ ಧಾರಾವಾಹಿಯಾಗಿದೆ. ಈ ಕೃತಿ ಪತ್ರಕರ್ತ ಅನೀಲ್ ಭಾರದ್ವಾಜ್ ಅವರ ಅಮೆರಿಕಾ ಪ್ರವಾಸದ ಅನುಭವ ಲೇಖನಗಳ ಸಂಕಲನ.
ಹೊಸ ಊರು, ದೇಶಕ್ಕೆ ಹೋದಾಗ ನೋಡಿದ್ದೆಲ್ಲಾ ಹೊಸತು ಎಂಬುದು ಸತ್ಯವಾದರೂ ಅವನ್ನೆಲ್ಲಾ ಸ್ವಾರಸ್ಯಕರವಾಗಿ ಇತರರಿಗೆ ಹೇಳುವ ಕಾಳಜಿ, ಉತ್ಸಾಹ, ಹೊಣೆಗಾರಿಕೆಯನ್ನು ಅನೀಲ್ ನಿಭಾಯಿಸಿದ್ದಾರೆ . ಅಮೆರಿಕದಲ್ಲಿ ಕೆಲಸದಲ್ಲಿರುವ ಗಂಡನ್ನು ಮದುವೆಯಾಗಿ ಅಲ್ಲಿಗೆ ಹೋಗಬೇಕೆನ್ನುವ ಆಸೆಯನ್ನು ಕಟ್ಟಿಕೊಂಡಿರುವ ಹೆಣ್ಣು ಮಕ್ಕಳು, ಅಲ್ಲಿ ಇದ್ದು ಬರಬೇಕೆನ್ನುವ ಕನಸುಕಂಡಿರುವ ತರುಣರು ಓದಲೇಬೇಕಾದ ಕೈಪಿಡಿ ಇದು. ತಮ್ಮ ಅನುಭವವನ್ನು ಅನಿಲ್ ಭಾರದ್ವಾಜ್ ಅಷ್ಟೇ ಕೌತುಕವಾಗಿ ಈ ಕೃತಿಯಲ್ಲಿ ವಿವರಿಸಿದ್ದಾರೆ.
ಅನಿಲ್ ಬಾರಧ್ವಾಜ್ ಅವರು ಜನಿಸಿದ್ದು ಆಂದ್ರ ಪ್ರದೇಶದ ಹಿಂದುಪುರದಲ್ಲಿ. ದಾವಣಗೆರೆಯ ಕಾಲೇಜಿನಲ್ಲಿ ಡಿಪ್ಲೊಮಾ ಪದವಿ ಪಡೆದ ಇವರು, ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ. ಡಾವಣಗೆರೆ ಸಿಟಿ ಕೇಬಲ್‌ನಲ್ಲಿ ವಾರ್ತಾವಾಚಕರಾಗಿ, ಈಟಿವಿ ಕನ್ನಡದಲ್ಲಿ ವರದಿಗಾರನಾಗಿ ಹಾಗೂ ಸುವರ್ಣ ನ್ಯೂಸ್‌ನಲ್ಲಿ ಹಿರಿಯ ಕಾರ್ಯಕ್ರಮ ನಿರ್ಮಾಪಕನಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಅಮೆರಿಕದಲ್ಲಿ ನೆಲೆಸಿದ್ದಾರೆ. ರೀಮೇಡ್ ಇನ್ ಅಮೆರಿಕ ಇವರ ಪ್ರಮುಖ ಕೃತಿ. ...
READ MORE