ಹಿರಿಯ ಲೇಖಕ ಲಕ್ಷ್ಮಿಕಾಂತ ಇಟ್ನಾಳ ಅವರ ಪ್ರವಾಸ ಕಥನ-ರಾಜಸ್ತಾನವೆಂಬ ಸ್ವರ್ಗದ ತುಣುಕು. ಶಿಲ್ಪಗ್ರಾಮ, ಬಿಕಾನೇರ್, ಪ್ರೋಕ್ರಾನ್ ಹೀಗೆ ರಾಜಸ್ತಾನ ವಿವಿಧ ವೈವಿಧ್ಯಮಯ ಸ್ಥಳಗಳನ್ನು, ಅಲ್ಲಿಯ ಐತಿಹಾಸಿಕ ಸಂಗತಿಗಳನ್ನು ಹೇಳುತ್ತಲೇ ಸದ್ಯ ಈ ಸ್ಥಳಗಳ ವಾಸ್ತವತೆಯನ್ನು ಬಿಂಬಿಸುತ್ತಾ, ರಾಜ್ಯಸ್ತಾನವೆಂಬುದು ಸ್ವರ್ಗದ ತುಣುಕು ಆಗಿದೆ ಎಂದು ಈ ಪ್ರದೇಶದ ಸೌಂದರ್ಯಕ್ಕೆ, ಅಲ್ಲಿಯ ಜನರ ಭಾಷೆ, ಸಂಸ್ಕೃತಿಯನ್ನು ಪರಿಚಯಿಸುತ್ತಾ ಹೋಘುತ್ತಾರೆ. ಸರಳ ನಿರೂಪಣೆ ಈ ಕೃತಿಯ ಆಕರ್ಷಣೆ; ಓದುಗರವನ್ನು ಆತ್ಮೀಯವಾಗಿ ಸೆಳೆಯುತ್ತದೆ.
ಹಿರಿಯ ಲೇಖಕ ಲಕ್ಷ್ಮಿಕಾಂತ ಇಟ್ನಾಳರು ಧಾರವಾಡದವರು. ಇವರಿಗೆ ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯು ಡಾ. ಯು.ಆರ್. ಅನಂತಮೂರ್ತಿ ಸಾಹಿತ್ಯ ಪುರಸ್ಕಾರ ನೀಡಿದೆ. ಇವರು ತಮ್ಮದೇ ಬ್ಲಾಗ್ ಹೊಂದಿದ್ದಾರೆ. ಕೃತಿಗಳು: ರಾಜಸ್ತಾನವೆಂಬ ಸ್ವರ್ಗದ ತುಣುಕು (ಪ್ರವಾಸ ಕಥನ), ಜೈ ಹೋ (ಗುಲ್ಜಾರರ ಹಾಡುಗಳು), ದಸ್ತಕ್ ...
READ MORE