ಖಗೋಳ ವಿಜ್ಞಾನಿ ಎಸ್. ಚಂದ್ರಶೇಖರ್ ಅವರನ್ನು ಭೇಟಿ ಮಾಡಲೇಬೇಕು ಎಂದು ತಮ್ಮ ಮಗನಿಗೆ ಪಟ್ಟು ಹಾಕಿ ಅಮೆರಿಕಕ್ಕೆ ತೆರಳಿದ ಸಾಹಿತಿ ಜಿ.ಟಿ. ನಾರಾಯಣರಾವ್, ವಿಜ್ಞಾನಿಯ ಜೀವನ ಚರಿತ್ರೆ ಬರೆಯುವುದರ ಜೊತೆಗೆ ಪ್ರವಾಸ ಸಾಹಿತ್ಯವನ್ನೂ ರಚಿಸುತ್ತಾರೆ. ಅದೇ ’ಸಪ್ತಸಾಗರದಾಚೆಯೆಲ್ಲೋ’.
ಸುಮ್ಮನೆ ಅಲೆದಾಡುವುದು, ಜನ ಜಂಗುಳಿಯಲ್ಲಿ ಕಳೆದು ಹೋಗುವುದು, ಮ್ಯೂಸಿಯಮ್ಮುಗಳಲ್ಲಿ ಮೈಮರೆಯುವುದರ ಬಗ್ಗೆ ಕೃತಿ ಪ್ರಸ್ತಾಪಿಸದೇ ಇರುವುದು ವಿಶೇಷ. ಇದೊಂದು ಪ್ರವಾಸಕಥನವಾದರೂ ವಿಜ್ಞಾನಿಯನ್ನು ಸಂದರ್ಶಿಸಿದ ಛಾಯೆ ಢಾಳಾಗಿ ಕಾಣುತ್ತದೆ. ಇದನ್ನು ಸ್ವತಃ ಲೇಖಕರೇ ಹೇಳಿಕೊಂಡಿದ್ದಾರೆ.
ಹೀಗಾಗಿ ಪ್ರವಾಸ ಕಥನವೂ ಆಗಿರುವ ವ್ಯಕ್ತಿ ಚಿತ್ರಣವೂ ಆಗಿರುವ ಈ ಕೃತಿ ವಿಭಿನ್ನ ನೆಲೆಯಲ್ಲಿ ಗಮನ ಸೆಳೆಯುತ್ತದೆ.
©2024 Book Brahma Private Limited.