ಲೇಖಕಿ ಡಾ. ನಿರಂಜನ ವಾನಳ್ಳಿ ಅವರ ಪ್ರವಾಸ ಕಥನ ʼತಶಾಕೂರ್ ತಜಕಿಸ್ತಾನ್ʼ. ಇದು ತಜಕಿಸ್ತಾನದ ಬಗ್ಗೆ ಕನ್ನಡದಲ್ಲಿ ಬಂದ ಮೊದಲ ಪುಸ್ತಕ ಎಂದಿದ್ದಾರೆ.. ತಜಿಕ್ ಭಾಷೆಯಲ್ಲಿ ‘ತಶಾಕೂರ್’ ಎಂದರೆ ಧನ್ಯವಾದ ಎಂದು ಅರ್ಥ. ಪುಸ್ತಕವು ಮಧ್ಯ ಏಷ್ಯಾದಲ್ಲಿ ಬರುವ ಪುಟ್ಟ ದೇಶವಾದ ತಜಕಿಸ್ತಾನದ ಬಗ್ಗೆ ಹೇಳುತ್ತಿದ್ದು, ನಿರಂಜನ ಅವರು ಅಲ್ಲಿಯ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕರಾಗಿ ,ತಜಕಿಸ್ತಾನದ ರಾಜಧಾನಿ ದುಶಾಂಬೆಯಲ್ಲಿ ಹದಿನೈದು ತಿಂಗಳು ಕೆಲಸ ಮಾಡಿದ ತಮ್ಮ ಅನುಭವವನ್ನು ಪುಸ್ತಕದ ರೂಪದಲ್ಲಿ ಹಂಚಿಕೊಂಡಿದ್ದಾರೆ. ಹಾಗೆಯೇ, ವಿದೇಶಿ ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡುವಾಗ ಎದುರಿಸಬೇಕಾದ ಅನೇಕ ಸಮಸ್ಯೆಗಳು, ಅಲ್ಲಿನ ಆಚಾರ- ವಿಚಾರಗಳು, ವ್ಯವಸ್ಥೆಗಳು, ಜನರು, ಭಾಷೆ ಹೀಗೆ ಆ ನಾಡಿನ ಬಗ್ಗೆ ಹೊಸ ಸಂಗತಿಗಳನ್ನೂ ಈ ಅನುಭವ ಕಥನ ವಿವರಿಸುತ್ತದೆ.
ನಿರಂಜನ ವಾನಳ್ಳಿ ಹುಟ್ಟಿದ್ದು(1965) ಉತ್ತರ ಕನ್ನಡ ಜಿಲ್ಲೆಯ 'ವಾನಳ್ಳಿ'ಯಲ್ಲಿ. ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದರು. ಕವಿ, ವಿಮರ್ಶಕ, ಸಂಶೋಧಕ, ನುಡಿಚಿತ್ರಕಾರ, ಅಂಕಣಕಾರ, ಫ್ರೀಲಾನ್ಸ್ ಪತ್ರಕರ್ತ. ಪ್ರಾಧ್ಯಾಪಕ. ಸದಾ ಒಂದಲ್ಲೊಂದು ಪತ್ರಿಕೆ, ನಿಯತಕಾಲಿಕಗಳಲ್ಲಿ ವೈವಿಧ್ಯಮಯ ಬರಹಗಳನ್ನು ಪ್ರಕಟಿಸುತ್ತಿದ್ದರು. ದ.ಕ.ಜಿಲ್ಲೆಯ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಗಿದ್ದರು. ಪ್ರಸ್ತುತ ಸಂಗೀತ ವಿಶ್ವವಿದ್ಯಾನಿಲಯದ ಕುಲಸಚಿವರು. ನಿಯತಕಾಲಿಕ ಪತ್ರಿಕೋದ್ಯಮ, ಪರಿಸರ ಪತ್ರಿಕೋದ್ಯಮ, ಎಲ್ಲರಿಗೂ ಬೇಕು ಸಂವಹನದ ಕಲೆ, ಪತ್ರಿಕಾ ಮಂಡಳಿ ಏನು? ಎತ್ತ? ಸೇರಿದಂತೆ 'ಒಂದು ಅಡಿ ಭೂಮಿ, ಬೊಗಸೆ ತುಂಬ ಪ್ರೀತಿ-ಕವನ ಸಂಕಲನ' ಇದು 31 ನೇ ಕೃತಿ. ಕಂಡಿದ್ದು ಕಾಡಿದ್ದು-ಇವರ ಅಂಕಣ ಬರೆಹ. ಪ್ರೀತಿಗೆಷ್ಟು ಮುಖಗಳು, ಹುಡುಕಾಟದ ಹೊತ್ತು, ಆ ಕ್ಷಣದ ...
READ MORE