ದೇವಭೂಮಿಯಲ್ಲೊಂದಷ್ಟು ದಿನ... ಒಂದು ಪ್ರವಾಸ ಕಥನ. 'ದೇವಭೂಮಿ' ಎಂದು ಕರೆಸಿಕೊಳ್ಳುವ ಉತ್ತರಾಖಂಡ ರಾಜ್ಯದ 'ಚಾರ್ಧಾಮ್'ಗಳ ಯಾತ್ರಾ ಅನುಭವವೇ ಈ ಕೃತಿ. ಚಾರ್ಧಾಮ್' ಗಳ ಪ್ರಾಮುಖ್ಯತೆ, ನಿಸರ್ಗದ ಸೊಬಗು, ಧಾರ್ಮಿಕ ವೈಚಾರಿಕತೆ ಮತ್ತು ದೈವಿಶಕ್ತಿಯ ವಿಶ್ಲೇಷಣೆಯೇ ಈ ಪ್ರವಾಸಕಥನದ ಕಥಾವಸ್ತು.
ಬಾಗಲಕೋಟೆ ಜಿಲ್ಲೆಯ, ಬೋಡನಾಯಕದಿನ್ನಿ ಗ್ರಾಮದಲ್ಲಿ ಜನಿಸಿದ 'ದೇಹ' ಕಾವ್ಯನಾಮದಿಂದ ಬರೆಯುವ ಹನುಮಂತರಾವ ದೇಸಾಯಿ ಅವರು ಈಗಿನ ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ಕಲಬುರಗಿ, ಆಳಂದದಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮುಗಿಸಿ, ಕಲಬುರಗಿಯ ಸರಕಾರಿ ಪದವಿ ಕಾಲೇಜಿನಿಂದ ವಿಜ್ಞಾನದಲ್ಲಿ ಪದವಿ, ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯಿಂದ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, M.Phil ಹಾಗೂ ಡಾಕ್ಟರೇಟ ಪದವಿ ಪಡೆದರು. ‘ದೇಹ’ ಅವರ ಇಂದಿನ ಪದವಿ ಮತ್ತು ಸದಸ್ಯತ್ವಗಳು M.Sc; MEE; M.Phil; PH.D; B'Ed; GFS; MEE; RQP; FMC. ಅಲ್ಟ್ರಾಟೆಕ್ ಸಿಮೆಂಟ ...
READ MOREತಮ್ಮ ಮನವಿ ಮೇರೆಗೆ ಉಚಿತವಾಗಿ ಈ ಕೃತಿಯ ಇ-ಪುಸ್ತಕ ಕಳುಹಿಸಲಾಗುತ್ತದೆ. ಸಂಪರ್ಕಸಿ; desaihy17@gmail.com