‘ಐಷರಾಮದ ಆಳದಲ್ಲಿ’ ಸಾರಾ ಅಬೂಬ್ಬಕರ್ ಅವರ ಪ್ರವಾಸಕಥನವಾಗಿದೆ. ಡಾಲರ್ ಗಳಿಕೆಯ ಮಹತ್ವಾಕಾಂಕ್ಷೆಯಿಂದ ತಾಯ್ಯಾಡಿಗೆ ವಿದಾಯ ಹೇಳುವ ಪ್ರಪಂಚದ ಪ್ರತಿಭೆಗಳನ್ನು ಧನಬಲದಿಂದ ಆಕರ್ಷಿಸಿ ದುಡಿಸಿ ಪ್ರಪಂಚವನ್ನೇ ಅಂಕೆಯಲ್ಲಿಟ್ಟುಕೊಳ್ಳಬಯಸುವ ಅಮೆರಿಕಾ ಈಗ ಪ್ರವಾಸಿಗಳ ಮೊದಲ ಆಯ್ಕೆ. ಇತ್ತೀಚೆಗೆ ಇದನ್ನು ಸಂದರ್ಶಿಸಿ ಬಂದ ಲೇಖಕಿ ಸಾರಾ ಅಬೂಬಕ್ಕರ್ ಇದನ್ನು ಚಿನ್ನದ- ಹೊನ್ನಿನ ನಾಡೆಂದು ವರ್ಣಿಸುತ್ತ ತಮ್ಮ ಪ್ರವಾಸ ಅನುಭವಗಳನ್ನು ಅಲ್ಲಿನ ಐಷಾರಾಮದ ಜೀವನವನ್ನು ಸ್ವರ್ಗ ಸಮಾನ ಮಾತ್ರವಲ್ಲ ಸ್ವರ್ಗವೇ ಎಂದು ಬಣ್ಣಿಸಿದ್ದಾರೆ.
ಕನ್ನಡದ ಪ್ರಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಅವರು 1936ರ ಜೂನ್ 30ರಂದು ಕಾಸರಗೋಡಿನ ಚಂದ್ರಗಿರಿ ತೀರದ ಗ್ರಾಮವೊಂದರಲ್ಲಿ ಜನಿಸಿದರು. ತಂದೆ ನ್ಯಾಯವಾದಿಗಳಾಗಿದ್ದ ಪಿ. ಅಹಮದ್ ಅವರು ಮತ್ತು ತಾಯಿ ಚೈನಾಬಿ ಅವರು. ಸಾರಾ ಅವರ ಪ್ರಾಥಮಿಕ ವಿದ್ಯಾಭ್ಯಾಸ ಅವರ ಹುಟ್ಟಿದೂರಿನಲ್ಲೇ ನೆರವೇರಿತು. ಮುಂದೆ ಅವರು ಹೈಸ್ಕೂಲುವರೆಗೆ ಕಲಿತದ್ದು ಕಾಸರಗೋಡಿನಲ್ಲಿ. ಎಂಜನಿಯರ್ ಆಗಿದ್ದ ಅಬೂಬಕ್ಕರ್ ಅವರೊಡನೆ ಸಾರಾ ಅವರ ವಿವಾಹ ಏರ್ಪಟ್ಟು ವಿದ್ಯಾಭ್ಯಾಸಕ್ಕೆ ವಿದಾಯ ಹೇಳುವಂತಾಯಿತು. ಆದರೆ ಓದಿನಲ್ಲಿ ನಿರಂತರ ಆಸಕ್ತರಾಗಿದ್ದ ಸಾರಾ ಅವರು ಶಿವರಾಮ ಕಾರಂತರು, ಇನಾಂದಾರ್, ಭೈರಪ್ಪ, ಅನಂತಮೂರ್ತಿ ಇವರೆಲ್ಲರ ಬರವಣಿಗೆಗೆ ಮಾರು ಹೋಗಿ ಸದಾ ...
READ MORE