ಲೇಖಕಿ ಉಮಾ ರಾವ್ ಅವರ ಪ್ರವಾಸ ಕಥನ- ಇನ್ನು ಎಲ್ಲಿಗೋಟ. ತಮ್ಮ ಪ್ರವಾಸದ ಅನುಭವಗಳನ್ನು ಟಿಪ್ಪಣಿ ರೂಪದಲ್ಲಿ ದಾಖಲಿಸಿದ ಕೃತಿ ಇದು. ಪ್ರತಿ ಪ್ರವಾಸಿಗರ ಅನುಭವ ವಿಶಿಷ್ಟ. ಏಕೆಂದರೆ, ಗ್ರಹಿಕೆಯು ವಿಶಿಷ್ಟವಾಗಿರುತ್ತದೆ. ಅದು ಅವರ ಅನುಭವ ಗ್ರಹಿಕೆ, ಶಿಕ್ಷಣ, ಸೂಕ್ಷ್ಮ ದೃಷ್ಟಿ, ಪಡೆದ ಶಿಕ್ಷಣ -ಈ ಎಲ್ಲವನ್ನೂ ಒಳಗೊಂಡು ಪ್ರವಾಸ ಕಥನಕ್ಕೆ ತನ್ನದೇ ಆದ ಮೆರಗು ಬರುತ್ತದೆ. ಈ ಹಿನ್ನೆಲೆಯಲ್ಲಿ ದಾಖಲಾದ ಇಲ್ಲಿಯ ಪ್ರವಾಸ ಟಿಪ್ಪಣಿಗಳು, ಓದುಗರ ಗಮನ ಸೆಳೆಯುತ್ತವೆ.
1948 ಸೆಪ್ಟಂಬರ್ 1ರಂದು ಜನಿಸಿದ ಇವರು ಜಾಹೀರಾತು ಉದ್ಯಮದಲ್ಲಿ ಕಾಪಿರೈಟರ್, ಪತ್ರಕರ್ತೆಯಾಗಿ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಿದ್ದಾರೆ. ಸೃಜನಶೀಲ, ಪ್ರಗತಿಪರ ವಿಚಾರಧಾರೆಗಳನ್ನು ಪ್ರತಿಪಾದಿಸುವ, ಸೂಕ್ಷ್ಮ ಸಂವೇದನೆಯುಳ್ಳ ಲೇಖಕಿಯಾಗಿ ಮುಖ್ಯವೆನಿಸುತ್ತಾರೆ. 80ರ ದಶಕದಲ್ಲಿ, ಉಮಾರಾವ್ ರವರು 'ಫ್ರೀಲಾನ್ಸ್ ಕಾಪಿರೈಟರ್' ಹಾಗೂ 'ಜರ್ನಲಿಸ್ಟ್' ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಉಮಾರವರ ಬರಹ, ಕಥೆಗಳು ಕನ್ನಡದ ಹಲವಾರು ದಿನಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಮಹಿಳಾ ವರ್ಷ ದತ್ತಿ ನಿಧಿ ಪ್ರಶಸ್ತಿ, ಗೊರುರು ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಎಚ್.ವಿ ಸಾವಿತ್ರಮ್ಮ ಪ್ರಶಸ್ತಿ, ಮುಂಬೈ ಡೈರಿಗೆ ಬಹುಮಾನ ಲಭಿಸಿದೆ. ಅಗಸ್ತ್ಯ, ಕಾಡು ಹಾದಿ, ...
READ MORE