ಲೇಖಕರಾದ ಸಿದ್ದರಾಮ ಹೊಳ್ಕಲ್ ಅವರು ಕವಿತೆ, ಕಥೆ, ಲಲಿತ ಪ್ರಬಂಧ, ಪ್ರವಾಸಕಥನ, ವ್ಯಕ್ತಿ ಚಿತ್ರಣ, ಗಜಲ್-ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದವರು. ಸಿದ್ದರಾಮ ಹೊಳ್ಕಲ್ ಅವರು ಬರೆದಿರುವ ’ಮೂರು ದೇಶ ನೂರೊಂದು ಅನುಭವ ’ ಎನ್ನುವ ಪ್ರವಾಸಕಥನವು ಹತ್ತಾರು ಜನರನ್ನು ಸುತ್ತ ಕೂಡಿಸಿಕೊಂಡು, ಅವರನ್ನು ನಗಿಸುತ್ತ, ವಿವಾದಕ್ಕೆ ದೂಡುತ್ತ, ಚಿಂತನೆಗೆ ಹಚ್ಚುತ್ತಾ ಕುತೂಹಲಕ್ಕೆ ಒಡ್ಡುತ್ತ ಸಾಗುವ ಆಪ್ತ ಕಥನದ ರೀತಿಯಾಗಿದೆ.
ಕುತೂಹಲವನ್ನು ಪೋಷಿಸುತ್ತಲೇ ಪ್ರವಾಸದ ನೆಲೆಗಳನ್ನು ವಾಸ್ತವದಲ್ಲಿ ಕಟ್ಟಿಕೊಡುತ್ತದೆ. ಸಿಂಗಾಪುರದ ವಸತಿ ಗೃಹದಲ್ಲಿ ನಡೆದ ದಂಡದ ಪ್ರಕರಣ, ಹೈಲಾಂಡಿನಲ್ಲಿ ಸರ್ಕಾರಿ ಪೋಷಿತ ವೇಶ್ಯಾವಾಟಿಕೆ ಮತ್ತು ಹೆಣ್ಣನ್ನು ಭೋಗದ ವಸ್ತುವನ್ನಾಗಿಸಿದ ಆಧುನಿಕ ಕಾಲದ ಪ್ರವಾಸೋದ್ಯಮ ಎನ್ನುವ ಆರ್ಥಿಕ ಆಮೀಷರ ಲೈಂಗಿಕ ರೋಗ ಈ ಎಲ್ಲವುಗಳು ನಮ್ಮನ್ನು ಒಂದು ವಿಷಾದದ ನೆಲೆಗೆ ದೂಡುತ್ತದೆ.
©2024 Book Brahma Private Limited.