ಚಿತ್ರಶ್ರೀ, 43, ಕಲಾಲೇಖಕಿ ಜಾನಕಿ ಶ್ರೀನಿವಾಸ್ ಅವರ ‘ಕೊಡಿಗೆಹಳ್ಳಿಯಿಂದ ಕ್ಯಾಲಿಫೋರ್ನಿಯಾವರೆಗೆ’ ಪ್ರವಾಸ ಕಥನವಾಗಿದೆ. ಈ ಕೃತಿಗೆ ಡಿ.ವಿ.ಗುರುಪ್ರಸಾದ್ ಅವರು ಬೆನ್ನುಡಿ ಬರೆದಿದ್ದು, ‘ಜಾನಕಿ ಅವರು ತನ್ನ ಹೊಸತನದ ಬರವಣಿಗೆಯ ಮೂಲಕ ಓದುಗರನ್ನು ಆಕರ್ಷಿಸುತ್ತಿದ್ದಾರೆ. ಕರ್ನಾಟಕದ ಹಳ್ಳಿಗಳಿಂದ ಮೊದಲುಗೊಂಡು ಭಾರತದ ವಿವಿಧ ಪ್ರೇಕ್ಷಣೀಯ ಸ್ಥಳಗಳ ವಿವರಣೆ ನೀಡಿ ಫ್ರಾನ್ಸ್ ಮತ್ತು ಅಮೆರಿಕ ದೇಶಗಳ ಪ್ರವಾಸದ ಬಗ್ಗೆಯೂ ಪ್ರಸ್ತಾಪನೆ ಇರುವ ಬಹುಷಃ ಏಕೈಕ ಕೃತಿ ಇದಾಗಿರಬಹುದು. ಇನ್ನೊಂದು ವಿಶೇಷವೆಂದರೆ ಇದರಲ್ಲಿ ಆತ್ಮಕಥನದ ಅಂಶಗಳೂ ಇವೆ ಹಾಗೂ ಕವನಗಳೂ ಇವೆ. ಜಾನಕಿ ಅವರ ಶೈಲಿ ಸರಳ ಹಾಗೂ ಸುಂದರವಾಗಿದ್ದು, ಕೃತಿ ಆತ್ಮೀಯವಾಗಿದೆ’ ಎಂದಿದ್ದಾರೆ.
ಬೆಂಗಳೂರು ಮೂಲದವರಾದ ಜಾನಕಿ ಶ್ರೀನಿವಾಸ್ ಸಣ್ಣ ಕತೆಗಳಲ್ಲಿ ಹೆಸರು ಮಾಡಿರುವ ದಿ.ಕೆ.ಗೋಪಾಲಕೃಷ್ಣರಾಯರ ಮಗಳು. 28-08-1952 ರಂದು ಜನಿಸಿದರು. ಬೆಂಗಳೂರು ದಕ್ಷಿಣ ಕ್ಷೇತ್ರದ ಗುರುಕುಲಂನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ಅವರು, ಗಾಂಧೀಬಜಾರ್ ನ ಚಿನ್ನಿ ಸ್ಕೂಲ್ ನಲ್ಲಿ ಮಧ್ಯಮ, ಗಿರಿಜಾಂಬ ಮುಕುಂದ ದಾಸ್ ಸರ್ಕಾರಿ ಶಾಲೆಯಲ್ಲಿ ಹೈಸ್ಕೂಲ್ ವ್ಯಾಸಂಗ ಪೂರ್ತಿಗೊಳಿಸಿದರು. ಪಿಯುಸಿಯನ್ನು ಎಪಿಎಸ್ ಕಾಲೇಜು, ವಿಜಯ ಕಾಲೇಜಿನಲ್ಲಿ ಬಿ.ಎ ಹಾನರ್ಸ್ ಮಾಡಿ, ಸೆಂಟ್ರಲ್ ಕಾಲೇಜಿನಲ್ಲಿ ಎಂ.ಎ ಶಿಕ್ಷಣ ಗಳಿಸಿದರು. ತಮ್ಮ 60ನೇ ವಯಸ್ಸಿನಲ್ಲಿ ಸಾಹಿತ್ಯದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡ ಅವರು ಕಥೆಯೊಳಗೇಳು ಕಥೆ, ಸಂಪತ್ ಮತ್ತು ಇತರ ...
READ MORE