ವಿದ್ಯಾ ಕುಂದರಗಿ ಅವರ ಪ್ರವಾಸ ಕಥನವಿದು. ಆಫ್ರಿಕಾ ಖಂಡದಲ್ಲಿ ಹರಿಯುವ ನೈಲ್‌ನದಿಯ ಪ್ರದೇಶದಲ್ಲಿ ಪ್ರವಾಸ ಮಾಡಿರುವ ವಿದ್ಯಾ ಅವರು ತಮ್ಮ ಅನುಭವವನ್ನು ಈ ಗ್ರಂಥದಲ್ಲಿ ಹಂಚಿಕೊಂಡಿದ್ದಾರೆ. ಇದು ಕೇವಲ ಅನುಭವ ವಿವರಿಸುವ ಗ್ರಂಥ ಮಾತ್ರ ಆಗಿಲ್ಲ. ವಿದ್ಯಾ ಅವರು ಅಧ್ಯಯನ ಶೀಲತೆಯು ಓದುವಾಗ ಗೋಚರವಾಗುತ್ತದೆ. ಕನ್ನಡ ಪ್ರವಾಸ ಸಾಹಿತ್ಯಕ್ಕೆ ಒಂದು ಒಳ್ಳೆಯ ಕೊಡುಗೆ. ಗುಂಪಿನಲ್ಲಿ ಪ್ರವಾಸ ಕೈಗೊಂಡಿದ್ದರೂ ನೈಲ್ ನದಿಯ ಪರಿಸರದ ಜನಜೀವನ, ಸ್ಮಾರಕಗಳು ಮತ್ತು ಪ್ರಾದೇಶಿಕ ವೈಶಿಷ್ಟ್ಯ ಹಾಗೂ ವೈಚಿತ್ರ್ಯಗಳನ್ನು ಸೊಗಸಾಗಿ ವಿವರಿಸಿದಾರೆ. ಇದು ಪ್ರವಾಸದ ವಾಸ್ತವ ಕಥನವಿರುವುದರ ಜೊತೆಯಲ್ಲಿಯೇ ಐತಿಹಾಸಿಕ - ಭೌಗೋಳ ಅಧ್ಯಯನವೂ ಆಗಿದೆ.