ರಂಗಸ್ವಾಮಿ ಮೂಕನಹಳ್ಳಿ ಅವರು ಬರೆದ ಪ್ರವಾಸ ಕಥನದ ಕೃತಿ-ಪಿಂಚ್ ಆಫ್ ಪ್ರಪಂಚ. ಸುಮಾರು 60ಕ್ಕೂ ಹೆಚ್ಚು ದೇಶಗಳನ್ನು ಸಂದರ್ಶಿಸಿರುವ ಲೇಖಕರು ವೃತ್ತಿಯಲ್ಲಿ ಉದ್ಯಮಿ ಮತ್ತು ಬ್ಯಾಂಕಿಂಗ್ ಕ್ಷೇತ್ರ ಪರಿಣಿತರು. ತಾವು ಸಂದರ್ಶಿಸಿದ ಹತ್ತು ದೇಶಗಳ ಬಗ್ಗೆ ವಿವರವಾಗಿ ಬರೆದಿದ್ದಾರೆ. ಪ್ರತಿ ದೇಶದ ಜನಜೀವನ, ಸಂಸ್ಕೃತಿ, ಆಹಾರಪದ್ಧತಿ, ಪ್ರೇಕ್ಷಣೀಯ ಸ್ಥಳಗಳು, ಶಿಷ್ಟಾಚಾರಗಳು, ಇತಿಹಾಸ ಮುಂತಾದ ಹಲವು ವಿಷಯಗಳ ವರ್ಣರಂಜಿತ ಪರಿಚಯ, ಪ್ರತಿ ಪುಟದಲ್ಲೂ ಅನನ್ಯ ಮಾಹಿತಿ, ಕೂತಲ್ಲೇ ಜಗತ್ತು ತೋರಿಸುವ ಅತ್ಯಾಕರ್ಷಕ ವಿಡಿಯೋಗಳು, ಪ್ರವಾಸ ಹೋಗುವಾಗ ಪೂರ್ವಸಿದ್ಧತೆ ಹೇಗಿರಬೇಕು ಎಂಬ ಸಲಹೆ ಇದೆ. ಸ್ಪೇನ್, ಪೋರ್ಚುಗಲ್, ಅಂದೋರಾ, ಲಿಚನ್‍ಸ್ಟೈನ್, ಸ್ವಿಟ್ಜರ್ ಲ್ಯಾಂಡ್ ನಂತಹ ಯುರೋಪಿಯನ್ ದೇಶಗಳು, ಯುಎಇ ಎಂಬ ಮರಳುಗಾಡಿನ ಅಚ್ಚರಿ, ಮಲೇಷ್ಯ, ಶ್ರೀಲಂಕಾದಂಥ ಏಷ್ಯನ್ ದೇಶಗಳು ಹೀಗೆ ವಿವಿಧ ಅಧ್ಯಾಯಗಳಡಿ ತಮ್ಮ ಅನುಭವಗಳನ್ನು ಬರೆದಿದ್ದಾರೆ.
`ಬಡತನದ ಬದುಕನ್ನು ಬಹಳ ಹತ್ತಿರದಿಂದ ಕಂಡ ನನಗೆ, ನಾನು ಕಂಡ ದೇಶಗಳ ಕುರಿತು ಬರೆದಿದ್ದೇನೆ' ಎಂದು ಲೇಖಕರು ಹೇಳಿದ್ದಾರೆ. ಈ ಕೃತಿಯನ್ನು ಓದಲೂ ಬಹುದು, ‘ನೋಡಲೂ’ ಬಹುದು! ಆಯಾ ದೇಶಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ಪುಸ್ತಕದಲ್ಲಿ ಅಳವಡಿಸಲಾಗಿದೆ. ಪ್ರವಾಸ ಹೊರಡಲು ಸಿದ್ಧತೆ ಹೇಗಿರಬೇಕು ಎಂಬುದನ್ನೂ ಸ್ವತಃ ಲೇಖಕರೇ ವಿವರಿಸಿರುವ ವಿಡಿಯೋ ಕೂಡ ಪುಸ್ತಕದಲ್ಲಿ ಲಭ್ಯವಿದೆ.
©2024 Book Brahma Private Limited.