ಕರ್ನಾಟಕ ಸಾಹಿತ್ಯ ಅಕಾದೆಮಿಯ ಪ್ರವಾಸ ಅನುದಾನ ಯೋಜನೆ ಅಡಿಯಲ್ಲಿ ಲೇಖಕ ಪಿ.ವಿ ಕೃಷ್ಣಮೂರ್ತಿ ಅವರು ಕೈಗೊಂಡ ಮಧ್ಯಪ್ರದೇಶ ರಾಜ್ಯದ ಪ್ರವಾಸ ಕಥನ ‘ವಿಂಧ್ಯ ನರ್ಮದೆಯರ ನಾಡಿನಲ್ಲಿ’ ಎಂಬುದು. ಜಬಲ್ ಪುರ, ಅರವತ್ತನಾಲ್ಕು ಯೋಗಿನಿಯರ ಕೋಟೆ ಭೇರಾಘಾಟ್, ಸಾಂಚಿ, ಉದಯಗಿರಿ, ಭೋಜ್ ಪುರ, ಭೀಮ್ ಬೆಟ್ಕ, ಭೋಪಾಲ್ , ಉಜ್ಜಯಿನಿ, ಇಂದೂರು, ಧಾರ್, ಬಾಘ್ ಗುಹಾಲಯ, ದಿಗಂಬರ ಸಿದ್ಧಕ್ಷೇತ್ರ ಬಾವನಗಜಾ ಮೊದಲಾದ ಸ್ಥಳಗಳಲ್ಲಿನ ಚಾರಿತ್ರಿಕ ಮಹತ್ವದ ಸಂಗತಿ ಹಾಗೂ ಸಂದರ್ಶಿಸಿದ ವ್ಯಕ್ತಿ, ವಸ್ತುಸಂಗ್ರಹಾಲಯಗಳ, ಪ್ರಚ್ಯಾವಶೇಷ ಇತ್ಯಾದಿ ವಿಶೇಷತೆಗಳ ಸ್ವಾರಸ್ಯ ವಿವರಣೆಗಳಿಂದ ಕೂಡಿದೆ.
©2024 Book Brahma Private Limited.