ಲೇಖಕ-ಚಿಂತಕ ಬಾಗೇಪಲ್ಲಿ ಕೃಷ್ಣಮೂರ್ತಿ ಅವರ ಪ್ರವಾಸ ಕಥನ-ದ್ವೀಪವಾಸಿ ಭಾರತೀಯರು. ಅಂಡಮಾನ-ಲಕ್ಷದ್ವೀಪಗಳಿಗೆ ಲೇಖಕರು ಪ್ರವಾಸ ಕೈಗೊಂಡಿದ್ದು, ಅಲ್ಲಿಯ ತಮ್ಮ ಅನುಭವಗಳನ್ನು ದಾಖಲಿಸಿದ್ದೇ ಈ ಕೃತಿ. ಭಾರತೀಯ ಭೂಭಾಗದ ಸಣ್ಣ ತುಣುಕು ಪ್ರದೇಶವಾದ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಈ ಎರಡೂ ದ್ವೀಪಗಳು, ತಮ್ಮದೇ ಆದ ಸಂಸ್ಕೃತಿ-ಆಚಾರ-ವಿಚಾರ-ಜೀವನ ಶೈಲಿಯಿಂದ ಬೇರೆಯಾಗಿವೆ. ಭಾರತದ ಇತರೆ ಭೂಪ್ರದೇಶಗಳಿಂದ ವಿಭಿನ್ನತೆಯನ್ನು ಕಾಯ್ದುಕೊಂಡಿದೆ. ಈ ಕುರಿತು ಲೇಖಕರು ತಮ್ಮ ಅನುಭವಗಳನ್ನು ಇಲ್ಲಿ ದಾಖಲಿಸಿದ್ದಾರೆ.
©2024 Book Brahma Private Limited.