‘ಹೀಗೊಂದು ಏರೋಸ್ಪೇಸ್ ಪುರಾಣ’ ಜಯಶ್ರೀ ಕಾಸರವಳ್ಳಿ ಅವರ ಪ್ರವಾಸ ಕಥನವಾಗಿದೆ. ಆರಂಭದಿಂದಲೂ ಚೈತನ್ಯಪೂರ್ಣ ಬರವಣಿಗೆ ಮನ ಸೆಳೆಯುತ್ತದೆ. ಪಟ್ಟಿ ಪಾಡು, ಪರದಾಟಗಳ ನಡುವೆಯೂ ತೂರಿ ಬರುತ್ತಿದ್ದ ನಗೆಚಟಾಕಿ, ಅನ್ಯ ಜನಗಳ ಸ್ನೇಹಮಿಲನ, ವೀಲ್ ಚೇರಿನಲ್ಲಿ ಏಕಾಂಗಿಯಾಗಿ ಪಯಣಿಸಿದ ಪಯಣಿಕರ ಸಾಹಸಗಾಥೆ, ಭಾಷೆ ಬರದ ಹೆಣ್ಣೆಂದು ತನ್ನ ಫೈಟಿಗೆ ಹೋಗುತ್ತಿದ್ದವಳು ಓಡಿ ಬಂದು ಅಪ್ಪಿಕೊಂಡು ಹೋದದ್ದು ಒಂದು ರೀತಿಯ ಮಾನವ ವ್ಯಕ್ತಿತ್ವಗಳ ಕಿರು ನೋಟ, ಲೇಖಕರ ಲವಲವಿಕೆಯ " ಮಾತುಗಳಲ್ಲಿ ರೂಪ ತಾಳಿ. ಇದೊಂದು ಚೆಂದದ ಜೀವಂತ ಕಥಾ ಚಿತ್ರ ಶಿಲ್ಪವಾಗಿದೆ.
'ತಂತಿ ಬೇಲಿಯ ಒಂಟಿ ಕಾಗೆ' ಕಥಾ ಸಂಕಲನದ ಮೂಲಕ ಸಾಹಿತ್ಯ ಲೋಕ ಪ್ರವೇಶಿಸಿದ ಜಯಶ್ರೀ ಕಾಸರವಳ್ಳಿ ಅವರು ಮೊದಲ ಕೃತಿಗೇ ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಮಲ್ಲಿಕಾ ಪ್ರಶಸ್ತಿ ಹೀಗೆ ಕೆಲವು ಪ್ರಶಸ್ತಿ ಪಡೆದಿದ್ದಾರೆ. ಮಾರ್ಕೆಸ್ ಸೇರಿದಂತೆ ಹಲವು ಖ್ಯಾತ ಕತೆಗಾರರ ಕತೆಗಳನ್ನು ಜಯಶ್ರೀ ಕನ್ನಡಕ್ಕೆ ಅನುವಾದಿಸಿದ್ದಾರೆ. ನವದೆಹಲಿಯ 'ತುಲಿ ಕಾ' ಪ್ರಕಾಶನದ ಹತ್ತಕ್ಕೂ ಹೆಚ್ಚು ಮಕ್ಕಳ ಪುಸ್ತಕಗಳನ್ನು ಅವರು ಕನ್ನಡೀಕರಿಸಿದ್ದಾರೆ. ...
READ MORE