ಆಂಗ್ಲರ ನಾಡಿನಲ್ಲಿ ಅಲೆಮಾರಿ

Author : ಎಸ್.ಪಿ. ಪದ್ಮಪ್ರಸಾದ್‌

Pages 256

₹ 250.00




Year of Publication: 2021
Published by: ಅಂಕಿತ ಪುಸ್ತಕ
Address: 53, ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560004

Synopsys

‘ಆಂಗ್ಲರ ನಾಡಿನಲ್ಲಿ ಅಲೆಮಾರಿ’ ಡಾ.ಎಸ್.ಪಿ. ಪದ್ಮಪ್ರಸಾದ್ ಅವರ ನಾಲ್ಕನೇ ಪ್ರವಾಸ ಕಥನ. ಕನ್ನಡದ ಹಿರಿಯ ವಿದ್ವಾಂಸರೂ, ಸೃಜನಶೀಲ ಲೇಖಕರೂ ಆದ ಇವರು ತಮ್ಮ ಅರವತ್ತೇಳನೇ ವಯಸ್ಸಿನಲ್ಲಿ ಇಂಗ್ಲೆಂಡ್, ಸ್ಕಾಟ್ಲೆಂಡ್ ಗಳನ್ನುಮೊದಲಬಾರಿಗೆ ಏಕಾಂಗಿಯಾಗಿ ತಿರುಗಾಡಿ ಕಂಡ ನೋಟಗಳ, ಪಡೆದ ಅನುಭವಗಳ ವಿಶಿಷ್ಟ ನಿರೂಪಣೆ ಇಲ್ಲಿದೆ. ಬ್ರಿಟಿಷ್ ನಾಡನ್ನು ಕುರಿತ ಹಲವು ಪ್ರವಾಸ ಕಥನಗಳಿಗಿಂತಲೂ ಇದು ಭಿನ್ನವಾದುದು. ಪ್ರವಾಸಿ ಹಾಸ್ಟೆಲ್ ಗಳಲ್ಲಿ ವಾಸಿಸಿ, ತಾವೇ ಹಾದಿ ಹುಡುಕಿಕೊಂಡು ತಿರುಗಿ, ಆ ನಾಡಿನ ಹಲವಾರು ಸುಪ್ರಸಿದ್ಧ ಮ್ಯೂಸಿಯಂಗಳನ್ನು, ಚರ್ಚ್, ಅರಮನೆಗಳನ್ನು, ಮತ್ತಿತರ ಆಸಕ್ತಿಕರ ತಾಣಗಳನ್ನು ಕಂಡ ವಿವರಗಳು ಇಲ್ಲಿ ಸ್ವಾರಸ್ಯಕರವಾಗಿ ಕಥಿಸಲ್ಪಟ್ಟಿವೆ. ಪಿಕ್ ಪಾಕೆಟ್ ಪ್ರಕರಣ, ವೆಸ್ಟ್ ಮಿನಿಸ್ಟರ್ ಅಬೆ ಚರ್ಚ್ ವಿವರಗಳು, ಕವಿ ಕೀಟ್ಸ್ ನ ಮನೆಯನ್ನು ಕಂಡದ್ದು, ಷೇಕ್ಸ್ ಪಿಯರ್ ನ ಗ್ಲೋಬ್ ಥಿಯೇಟರ್ ನಲ್ಲಿ ನಾಟಕ ನೋಡಿದ್ದು, ಎಲ್ಲ ಓದುಗರ ಅನುಭವವನ್ನು ವಿಸ್ತರಿಸುವಂಥವು. ಈ ಕೃತಿಯ ಓದು ಮನರಂಜನೆಯೂ ಹೌದು. ಶಿಕ್ಷಣವು ಹೌದು. 

About the Author

ಎಸ್.ಪಿ. ಪದ್ಮಪ್ರಸಾದ್‌

ಎಸ್.ಪಿ. ಪದ್ಮಪ್ರಸಾದ್‌ ಜಾನಪದ, ಕಾವ್ಯ, ನಾಟಕ, ವಿಮರ್ಶೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಪದ್ಮ ಪ್ರಸಾದವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ.  ತಂದೆ ಎಸ್.ಪಿ. ಪಾಯಪ್ಪಶೆಟ್ಟಿ, ತಾಯಿ ಜಿನ್ನಮ್ಮ. ಪ್ರಾರಂಭಿಕ ಶಿಕ್ಷಣ ಹೊಸನಗರದಲ್ಲಿ. ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಿಂದ ಬಿ.ಎಸ್ಸಿ ಪದವಿ ಮತ್ತು ನ್ಯಾಷನಲ್ ಕಾಲೇಜ್ ಆಫ್ ಎಜುಕೇಷನ್‌ನಿಂದ ಬಿ.ಇಡಿ. ಪದವಿಯನ್ನೂ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಹಾಗೂ ‘‘ಜೈನ ಜನಪದ ಸಾಹಿತ್ಯ-ಸಂಪಾದನೆ ಹಾಗೂ ಅಧ್ಯಯನ’’ ಪ್ರಬಂದ ಮಂಡಿಸಿ ಬೆಂಗಳೂರು ವಿಶ್ವ ವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಹೈಸ್ಕೂಲು ಅಧ್ಯಾಪಕರಾಗಿ ಪಿಎಚ್.ಡಿ. ಪದವಿಗಳಿಸಿದ ರಾಜ್ಯದ ಮೊದಲ ವ್ಯಕ್ತಿ ...

READ MORE

Related Books